

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳ್ಳಿ ಅವರ 40ನೇ ಜನ್ಮದಿನದ ಅಂಗವಾಗಿ ನಗರದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಭಾಭವನದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಪ್ರೇಮಬಿಂದು ಬ್ಲಡ್ ಸೆಂಟರ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 55 ಜನರು ರಕ್ತದಾನ ಮಾಡಿದರು.
ರಜತ್ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯರಾದ ಶಿವಕುಮಾರ ರಾಯನಗೌಡರ, ಸಂಧಿಲ್ ಕುಮಾರ, ಡಾ. ವಿ.ಎಂ. ಹಿರೇಮಠ, ಪ್ರಕಾಶ ಜಾಧವ, ಕಾಶೀಂ ಕೂಡಲಗಿ, ಮನೋಜ ಪಾಟೀಲ, ಸುನೀಲ್ ಮಠಪತಿ, ಬಾಳಮ್ಮ ಜಂಗನವರ, ಕಲಾವತಿ ದತ್ತವಾಡ, ವೀರೇಶ ಕಡಕೋಳಮಠ, ಪ್ರೇಮ್ ಜಾಧವ ಇತರರು ಇದ್ದರು.