ಧಾರ್ಮಿಕ ಕಾರ್ಯಗಳಿಂದ ಬದುಕಿನಲ್ಲಿ ನೆಮ್ಮದಿ

channarayapaatana yaga
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಸೌಹಾರ್ದ ವಾತಾವರಣದೊಂದಿಗೆ ಶಾಂತಿಯುತವಾಗಿ ಬದುಕು ನಡೆಸಲು ಧಾರ್ಮಿಕ ಕಾರ್ಯಕ್ರಮ ಅಗತ್ಯ ಎಂದು ಪ್ರಧಾನ ಅರ್ಚಕ ಸುನಿಲ್ ಕುಮಾರ್ ಶರ್ಮ ತಿಳಿಸಿದರು.
ಹೋಬಳಿಯ ಬೂದಿಗೆರೆಯಲ್ಲಿ ಭಾನುವಾರ ಶ್ರೀ ದೇಶನಾರಾಯಣಸ್ವಾಮಿ ದೇವಾಲಯದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಶೃಂಗೇರಿ ಉಭಯ ಜಗದ್ಗುರುಗಳ ದಿವ್ಯ ಅನುಗ್ರಹದೊಂದಿಗೆ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಮಹಾಪುಷ್ಪಯಾಗ ಸಹಿತ ಲಕ್ಷ ಶ್ರೀ ವಿಷ್ಣುಸಹಸ್ರನಾಮ ಜಪಯಾಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ಪ್ರಾಪ್ತವಾಗಲಿದೆ. ಪ್ರತಿದಿನ ದೇವರ ಪೂಜೆ ಮಾಡುವುದರಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಬಹುದು. ಮನದ ದೋಷಗಳು ನಿವಾರಣೆಯಾಗಿ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಭಜನೆ, ಪೂಜೆ, ಯಜ್ಞ, ಯಾಗ, ಪ್ರವಚನಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಮುಖಂಡ ಅನಂತರಾಜು ಮಾತನಾಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂಬ ಉದ್ದೇಶದಿಂದ ನಮ್ಮ ಪೂರ್ವಜರು ದೇವಾಲಯ ನಿರ್ಮಿಸಿದ್ದು, ಪೂಜೆ, ಭಜನೆಯಲ್ಲಿ ಪಾಲ್ಗೊಂಡರೆ ನಮ್ಮಲ್ಲಿನ ಕ್ಲೇಷ ಮಾಯವಾಗಿ ಮನಸ್ಸು ಹಗುರವಾಗುತ್ತದೆ ಎಂದರು.
ಅಧ್ಯಾತ್ಮ ಪ್ರಕಾಶಾಲಯದ ಸುದರ್ಶನ ಶರ್ಮ ಮಾತನಾಡಿ, ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳುವುದರಿಂದ ಎಲ್ಲರೂ ಒಗ್ಗಟ್ಟಿನ ಭಾವನೆ ಬೆಳೆಯುವ ಜತೆಗೆ ಗ್ರಾಮಕ್ಕೆ ಒಳಿತಾಗುತ್ತದೆ ಎಂದರು.
ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಶ್ರೀ ದೇಶನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಮಹಾಭಿಷೇಕ, ಲೋಕಕಲ್ಯಾಣರ್ಥವಾಗಿ ಶ್ರೀ ವಿಷ್ಣುಸಹಸ್ರನಾಮ ಹೋಮ, ಮಹಾಪೂರ್ಣಾಹುತಿ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net