ಪ್ರೀತಿ ನಿರಾಕರಿಸಿದ್ಧಕ್ಕೆ ಯುವತಿಗೆ ಇರಿದು ತಾನು ಇರಿದುಕೊಂಡ ಯುವಕ

Crime Logo
Published on
ಚನ್ನಪಟ್ಟಣ: ಪ್ರೀತಿ  ನಿರಾಕರಿಸಿದ ಕಾರಣಕ್ಕೆ ಕುಪಿತಗೊಂಡ ಯುವಕನೊಬ್ಬ ತನ್ನ ಯುವತಿಗೆ ಚಾಕುವಿನಿಂದ ಇರಿದು,  ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಪಟ್ಟಣ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಖಾಸಗಿ ಮೊಬೈಲ್​ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ವೆಂಕಟೇಶ್​ ಎಂಬಾತ ಈ ಕೃತ್ಯ ನಡೆಸಿದ್ದಾನೆ.  ಚನ್ನಪಟ್ಟಣದ  ಮೊಬೈಲ್ ಶೋರೂಂ ನಲ್ಲಿ ವೆಂಕಟೇಶ್ ಮತ್ತು ಯುವತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವತಿಯನ್ನು ಪ್ರೀತಿಸಲು ಮುಂದಾಗಿದ್ದ ವೆಂಕಟೇಶ್​, ಯುವತಿಗೆ ಹಲವಾರು ಬಾರಿ ತನ್ನ ಪ್ರೇಮ ನಿವೇಧನೆಯನ್ನು ಮಾಡಿಕೊಂಡಿದ್ದ. ಆದರೆ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ ಮಂಗಳವಾರ ಚನ್ನಪಟ್ಟಣದ ವರದರಾಜ ಸ್ವಾಮಿ ದೇವಾಲಯದ ಬಳಿ ಇರುವ ಯುವತಿ ಮನೆಗೆ ತೆರಳಿ ಮತ್ತೊಮ್ಮೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಯುವತಿ ಮತ್ತೆ ಪ್ರೀತಿಯನ್ನು ನಿರಾಕರಿಸಿದ ಕಾರಣ ಚಾಕುವಿನಿಂದ ಯುವತಿಯ ಹೊಟ್ಟೆಗೆ ಇರಿದಿದ್ದಾನೆ. ನಂತರ  ತಾನು ಸಹ ಕುತ್ತಿಗೆಗೆ ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.
ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ವೆಂಕಟೇಶ್​ಗೆ ಹೆಚ್ಚಿನ ರಕ್ತ ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net