ಚನ್ನಣ್ಣವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

23 Dwd 3 (Murugesh Channannavar)
Published on

ಧಾರವಾಡ: ಹೆಸ್ಕಾಂ ಜಾಗೃತ ದಳದ ಇನ್​ಸ್ಪೆಕ್ಟರ್ ಮುರುಗೇಶ ಚೆನ್ನಣ್ಣನವರ ಸಾಧನೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದೆ. 2021ರ ಡಿಸೆಂಬರ್​ನಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸುಮಾರು 3,649 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದರು. 42ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರು ಈ ಮೊದಲು ‘ಐರನ್ ಮ್ಯಾನ್’ ಗೌರವಕ್ಕೂ ಪಾತ್ರರಾಗಿದ್ದಾರೆ. ಪುನೀತ್ ರಾಜಕುಮಾರ್ ಅಭಿಮಾನಿಯಾಗಿರುವ ಅವರು ಈ ಸಾಧನೆಯನ್ನು ‘ಅಪು್ಪ’ಗೆ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net