ಚನ್ನಮ್ಮನ ಹೋರಾಟ, ಧೈರ್ಯ, ಸಾಹಸ ಸ್ಮರಣೀಯ

Channamma's struggle, courage and adventure are memorable
ಹುನಗುಂದ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಂಕ್ರಪ್ಪ ನೇಗಲಿ, ಮಹಾಂತೇಶ ನಾಡಗೌಡ, ಡಾ. ಮಹಾಂತೇಶ ಕಡಪಟ್ಟಿ ಇದ್ದರು.
Published on

ಹುನಗುಂದ: ಬ್ರಿಟಿಷರ ವಿರುದ್ಧ ಸ್ವಾತಂತ್ರೃಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರು ಚನ್ನಮ್ಮಳ ಧೈರ್ಯ ಮತ್ತು ಸಾಹಸ ಸದಾ ಸ್ಮರಿಸಬೇಕೆಂದು ಭೂನ್ಯಾಯ ಮಂಡಳಿ ಸದಸ್ಯ ಅಮರೇಶ ನಾಗೂರ ಹೇಳಿದರು.

ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬುಧವಾರ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಕಿತ್ತೂರು ಉತ್ಸವವನ್ನು ಬೆಳಗಾವಿಗೆ ಸೀಮಿತಗೊಳಿಸದೆ ರಾಜ್ಯಾದ್ಯಂತ ಆಚರಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಶೀಘ್ರ ನೀಡಬೇಕೆಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಂಕ್ರಪ್ಪ ನೇಗಲಿ, ಮಹಾಂತೇಶ ನಾಡಗೌಡ, ಡಾ. ಮಹಾಂತೇಶ ಕಡಪಟ್ಟಿ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ರವಿ ಹುಚನೂರ, ಮಹಾಂತೇಶ ಪರೂತಿ, ಸಂಗಣ್ಣ ಹುನ್ನಳ್ಳಿ, ಬಸವರಾಜ ಹೊಸೂರ, ಮಲ್ಲಣ್ಣ ಹೂಗಾರ, ಅಶೋಕ ಭಾವಿಕಟ್ಟಿ, ಮಲ್ಲು ಬಂಡರಗಲ್, ಸಂಗಮೇಶ ಭಾವಿಕಟ್ಟಿ, ಸಂಗಪ್ಪ ಹೂಲಗೇರಿ, ಮಹಾಂತೇಶ ಹೊದ್ಲೂರ, ರಾಜಕುಮಾರ ಬಾದವಾಡಗಿ, ವೀರೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net