ಚನ್ನಮ್ಮನ ಕಿತ್ತೂರು ಬಂದ್ ವಾಪಸ್

16kittur1
Published on

ಚನ್ನಮ್ಮನ ಕಿತ್ತೂರು: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಮಾ.18ರಂದು ಕರೆ ನೀಡಿದ್ದ ಕಿತ್ತೂರು ಬಂದ್ ಹಿಂಪಡೆಯಲಾಗಿದೆ

ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.18ರಂದು ಕ್ಷೇತ್ರದ ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಯಾವ ಪಕ್ಷಗಳ ವಿರುದ್ಧವೂ ಈ ಹೋರಾಟ ಹಮ್ಮಿಕೊಂಡಿಲ್ಲ. ರಾಣಿ ಚನ್ನಮ್ಮಾಜಿಗೆ ಆಗಿರುವ ಅನ್ಯಾಯದ ಕುರಿತು ಧ್ವನಿ ಎತ್ತುತ್ತಿದ್ದೇವೆ ಎಂದರು. ಕಿತ್ತೂರು ಹಾಗೂ ಕಿತ್ತೂರು ಕೋಟೆ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ, ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ ಎಂದರು.

ಸರ್ಕಾರಗಳ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಭರವಸೆ ನೀಡಿದರು. ಮುಸ್ಲಿಂ ಧರ್ಮಗುರು ಹಜರತ್ ತನ್ವೀರಸಾಬ್, ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಬಸವರಾಜ ಪರವಣ್ಣವರ, ಜಗದೀಶ ವಸದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net