ಚನ್ನಮ್ಮಳ ದೇಶ ಪ್ರೇಮ ಮಕ್ಕಳಲ್ಲಿ ಬರಲಿ

15Jaggu7
ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಗುರುವಾರ ರಾಣಿ ಚನ್ನಮ್ಮ ಜನ್ಮದಿನ ಪ್ರಯುಕ್ತ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಡಾ. ಎಸ್.ಡಿ. ಪಾಟೀಲ, ವರ್ಷಾ ಮುಚ್ಚಂಡಿಕರ, ರಾಚಯ್ಯ ಸ್ವಾಮೀಜಿ, ಶಶಿಕಾಂತ ಪಾಟೀಲ, ಬಾಬಾಸಾಹೇಬ ದೇಸಾಯಿ, ಭರಮಾ ಚೌಗಲಾ, ಅಪ್ಪಾಸಾಹೇಬ ದೇಸಾಯಿ ರಾಮಗೌಡ ಪಾಟೀಲ ಸುವರ್ಣ ಪಾಟೀಲ, ವಾಣಿ ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮಳ ದೇಶ ಪ್ರೇಮ, ನಾಡಿನ ಬಗ್ಗೆ ಅಭಿಮಾನ ಹೊಂದಿ ಅದನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ ಎಂದು ರಾಣಿ ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಡಿ. ಪಾಟೀಲ ಹೇಳಿದರು.

ತಾಲೂಕಿನ ಕಾಕತಿಯಲ್ಲಿ ಗುರುವಾರ ರಾಣಿ ಚನ್ನಮ್ಮಳ ಜನ್ಮದಿನಾಚರಣೆ ಪ್ರಯುಕ್ತ ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ, ರಾಣಿ ಚನ್ನಮ್ಮಳ ಶೌರ್ಯ, ಸಾಹಸಗಾಥೆ ಯುವ ಪೀಳಿಗೆಗೆ ಮನಮುಟ್ಟುವ ರೀತಿಯಲ್ಲಿ ತಿಳಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ ಮಾತನಾಡಿ, ಚನ್ನಮ್ಮಳ ತವರಲ್ಲಿ ವಿಜಯೋತ್ಸವದ ಜತೆಗೆ ಪ್ರತಿವರ್ಷ ನಮ್ಮ ಊರಿನ ಹೆಮ್ಮೆಯ ಮಗಳ ಜನ್ಮದಿನಾಚರಣೆ ಸಡಗರದಿಂದ ಆಚರಿಸುತ್ತೇವೆ. ಇದರಿಂದ ಹೆಮ್ಮೆ ಜತೆಗೆ ನಮ್ಮಲ್ಲಿ ದೇಶಾಭಿಮಾನ ಹೆಚ್ಚುತ್ತದೆ ಎಂದು ಹೇಳಿದರು.

ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ ಮಾತನಾಡಿ, ಚನ್ನಮ್ಮಳ ತವರು ಸಹ ಇತಿಹಾಸ ಗುರುತಿಸುವಂತಾಗಲು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದರು.

ಇದೇ ವೇಳೆ ಶಾಲಾ ಮಕ್ಕಳಿಂದ ಚನ್ನಮ್ಮ ವೇಷಭೂಷಣ ಮತ್ತು ಚನ್ನಮ್ಮನ ಕುರಿತಾದ ಹಾಡು ಮತ್ತು ಜೈಕಾರಗಳು ಮೊಳಗಿದವು. ಶಶಿಕಾಂತ ಪಾಟೀಲ, ಬಾಬಾಸಾಹೇಬ ದೇಸಾಯಿ, ಭರಮಾ ಚೌಗಲಾ, ಅಪ್ಪಾಸಾಹೇಬ ದೇಸಾಯಿ, ರಾಮಗೌಡ ಪಾಟೀಲ, ಸುವರ್ಣ ಪಾಟೀಲ, ವಾಣಿ ಪಾಟೀಲ, ಕವಿತಾ ಜುಟ್ಟಿ, ಶಕುಂತಲಾ ಶೆಟ್ಟಿ, ಹೇಮಾ ಕಾಜಗಾರ, ಸುಜಾತ ಕಡಬಡಿ, ಕವಿತಾ ಜುಟ್ಟಿ, ಮಹಾದೇವಿ ವಠಾರೆ, ಸಂಗೀತಾ ಮಾರಿಹಾಳ, ಸುವರ್ಣ ಬಾನಿ ಹಾಗೂ ಮಹಿಳಾ ಸಮಾಜದ ಸದಸ್ಯರು, ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಮಕ್ಕಳು ಇದ್ದರು. ಶಿಕ್ಷಕ ಮಹೇಶ ಅಕ್ಕಿ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net