ಚನ್ನಮ್ಮಾಜಿ ಹೋರಾಟ ಯುವಜನಾಂಗಕ್ಕೆ ಸ್ಫೂರ್ತಿ

16Athani1
Published on

ಅಥಣಿ: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮಾಜಿ ಶೌರ್ಯ, ಸಾಹಸ, ಹೋರಾಟ ಎಲ್ಲರಿಗೂ ಸ್ಮರಣೀಯವಾಗಿದೆ ಎಂದು ತಹಸೀಲ್ದಾರ್​ ಸಿದರಾಯ ಭೋಸಗಿ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಚನ್ನಮ್ಮಾಜಿ ವೀರಜ್ಯೋತಿ ಯಾತ್ರೆ ಸ್ವಾಗತಿಸಿ ಬೀಳ್ಕೊಡುವ ಸಂದರ್ಭದಲ್ಲಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮಾಜಿ ದೇಶಾಭಿಮಾನ ಯುವಜನಾಂಗಕ್ಕೆ ಸ್ಫೂರ್ತಿ ಎಂದರು.

ಪುರಸಭಾ ಅಧ್ಯೆ ಶಿವಲೀಲಾ ಬುಟಾಳೆ, ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಬ್ರಿಟಿಷರ ವಿರುದ್ದ ಪ್ರಥಮ ಹೋರಾಟದ ಕಹಳೆ ಊದಿದ ಕಿತ್ತೂರು ರಾಣಿ ಚನ್ನಮ್ಮಳ ಸಾಹಸ ಅಜರಾಮರವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅವರು ನಮ್ಮ ನಾಡಿನವರೆಂಬುದು ಹೆಚ್ಚು ಹೆಮ್ಮೆ ಎಂದರು.

ಪೂರ್ಣಕುಂಭದೊಂದಿಗೆ ಯಾತ್ರೆಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಣ್ಣಾಸಾಬ ತೆಲಸಂಗ, ಶಶಿಧರ ಬರ್ಲಿ, ಮಂಜು ಹೊಳಿಕಟ್ಟಿ, ಶಬ್ಬಿರ್​ ಸಾತಬಚ್ಚೆ, ಶಿವಾನಂದ ಕಲ್ಲಾಪುರ, ಬಸಗೌಡ ಕಾಗೆ, ನಿಂಗಣ್ಣ ಬಿರಾದಾರ, ರವೀಂದ್ರ ಮುರಗಾಲಿ, ಎಂ.ಆರ್​.ಮುಂಜೆ, ಎಸ್​.ಎಂ.ನಾಮದಾರ, ಮಂಜುನಾಥ ಸೌಂದಲಗೇಕರ, ಪ್ರಶಾಂತ ಗುರುಸ್ವಾಮಿ, ಎಂ.ಎಂ.ಮಿರ್ಜಿ, ಮಲ್ಲಿಕಾರ್ಜುನ ಕನಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net