

ಹುಬ್ಬಳ್ಳಿ: ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವ ಅಂಗವಾಗಿ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಚನ್ನಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವೀರ ವನಿತೆಯ ಶೌರ್ಯ ಗುಣಗಾನ ಮಾಡಿದರು.
ಹುಬ್ಬಳ್ಳಿ ಅಕ್ಕನ ಬಳಗದ ವತಿಯಿಂದ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಗದ ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ನಿರ್ಮಲ ಅಂಗಡಿ, ಮಂಗಳ ಕಬ್ಬೂರ್, ರೂಪಾ ಹರ್ತಿ, ಸುಲೋಚನಾ ಭೂಸನೂರ, ಜಯಶ್ರೀ, ಮಂಗಳ ಕುಪ್ಪಸ್ತ, ಜಯಶ್ರೀ ವಾಲಿ, ಶಕುಂತಲಾ ಮುಗಳಿ, ಮುಂತಾದವರು ಪಾಲ್ಗೊಂಡಿದ್ದರು.
ಪಂಚಸೇನೆ: ಪಂಚ ಸೇನಾ ಮತ್ತು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ವತಿಯಿಂದ ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವ ಆಚರಿಸಲಾಯಿತು. ಚನ್ನಮ್ಮಪುತ್ಥಳಿಗೆ ಎಸ್.ಎಸ್. ನಾಗನಗೌಡರ್, ಪಂಚಸೇನಾ ಕಿತ್ತೂರು ಕರ್ನಾಟಕದ ಅಧ್ಯಕ್ಷ ಶಶಿಶೇಖರ ಡಂಗನವರ, ರಾಜು ಕೊಟಗಿ ಮತ್ತು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು. ಗುರು ಕೆಲಗೇರಿ, ಶ್ರೀಕಾಂತ ಗುಳೇದ, ಗುರು ಶೆಲವಡಿ, ಬಾಪುಗೌಡ, ಕುಮಾರಗೌಡರ್, ಈಶ್ವರ ಶಿರಸಂಘಿ, ದೇವರಾಜ ದಾಡಿಬಾವಿ, ಶಶಿಧರ ಕೊಟಗಿ, ಮಹದೇವ ಇಚಟಗಿ, ಸಿ.ವಿ. ಹೊಂಬಳ, ಗುರು ಹಿರೇಗೌಡರ, ಚಿದಾನಂದ ಕಟ್ಟಿಮನಿ, ಸೂರಜ ಅವರಾಧಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವಾಯವ್ಯ ಸಾರಿಗೆ: ಹುಬ್ಬಳ್ಳಿಯ ವಾಯವ್ಯ ಸಾರಿಗೆ ಕಚೇರಿಯಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಅಧ್ಯಕ್ಷತೆ ವಹಿಸಿದ್ದರು. ಪಿ.ವೈ. ನಾಯಕ, ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಪ್ರಸನ್ನಕುಮಾರ ಬಾಲಾನಾಯಕ್, ಬಸವರಾಜ ಅಮ್ಮನ್ನವರ, ಬಿ. ಬೋರಯ್ಯ, ಮಾಲತಿ ಎಸ್.ಎಸ್, ಜಿ. ವಿಜಯಕುಮಾರ, ಶ್ರೀನಾಥ ಜಿ, ಎಂ.ಬಿ. ಕಪಲಿ, ಕೃಷ್ಣಾನಂದ ಭಟ್, ಹನುಮನಗೌಡ ಜಿ, ಎಂ.ಡಿ. ಸುಂಕದ ಉಪಸ್ಥಿತರಿದ್ದರು.