

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮ ಜನ್ಮಸ್ಥಳ ಕಾಕತಿಯನ್ನು ಸರ್ಕಾರ ಅಭಿವದ್ಧಿಪಡಿಸಬೇಕು. ಸರ್ಕಾರ ಮಾಡದಿದ್ದರೆ ಪಂಚಮಸಾಲಿ ಸಮುದಾಯವೇ ರಾಮ ಮಂದಿರ ಮಾದರಿಯಲ್ಲಿ ಅಭಿವದ್ಧಿಪಡಿಸಲು ಪಣ ತೊಡಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಾಚಾರಿ ಕಾಲೇಜಿನ ಸಭಾಭವನದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗೂ ಕಿತ್ತೂರ ಚನ್ನಮ್ಮ ಜ್ಯೋತಿಯಾತ್ರೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಕತಿಯಲ್ಲಿ ಅರಮನೆ ನಿರ್ಮಾಣವು ಪ್ರವಾಸಿ ತಾಣವಾಗುವಂತೆ ಅಭಿವದ್ಧಿಪಡಿಸಬೇಕು. 2ರಂದು ಚನ್ನಮ್ಮ ಪುಣ್ಯಸ್ಮರಣೋತ್ಸವ ನಿಮಿತ್ತ ಅದ್ಧೂರಿ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಕತಿಯಿಂದ ಹಿರೇಬಾಗೇವಾಡಿ, ಕಿತ್ತೂರ, ಸಂಗೊಳ್ಳಿ, ಅಮಟೂರ ಮಾರ್ಗವಾಗಿ ಬೈಲಹೊಂಗಲ ಪಟ್ಟಣ ತಲುಪಲಿದೆ. ಅಂದು ಪಟ್ಟಣದಲ್ಲಿ ಜ್ಯೋತಿಯಾತ್ರೆ ಮೆರವಣಿಗೆ ನಡೆಯಲಿದೆ ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸಮುದಾಯದ ತಾಲೂಕಾಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾತನಾಡಿ, ಯುವ ಪೀಳಿಗೆಗೆ ಚನ್ನಮ್ಮ ಶೌರ್ಯ ಆದರ್ಶಗಳನ್ನು ತಿಳಿಸಲು ಜ್ಯೋತಿಯಾತ್ರೆ ನಡೆಸಲಾಗುತ್ತಿದೆ ಎಂದರು. ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಆರ್.ಕೆ.ಪಾಟೀಲ, ಜಿ.ಪಂ.ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಬಿ.ಬಿ.ಗಣಾಚಾರಿ, ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಜಗದೀಶ ಕೋತಂಬ್ರಿ, ಶಿವಾನಂದ ಬೆಳಗಾವಿ, ನಿಂಗಪ್ಪ ಚೌಡಣ್ಣವರ, ಕುಮಾರಗೌಡ ಪಾಟೀಲ, ವೀರೇಶ ಹಲಕಿ, ಶಿವಬಸಪ್ಪ ತುರಮರಿ, ಎ್.ಎಸ್.ಸಿದ್ಧನಗೌಡರ ಇತರರಿದ್ದರು.