

ಚಿಕ್ಕೋಡಿ: ಸ್ವಾತಂತ್ರೃ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಯುವಜನರಿಗೆ ಸ್ಫೂರ್ತಿ ಎಂದು ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಹೇಳಿದರು.
ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ವಿಜಯ ಜ್ಯೋತಿಯಾತ್ರೆ ರಥವನ್ನು ತಾಲೂಕಾಡಳಿತದಿಂದ ಅದ್ದೂರಿಯಾಗಿ ಬರಮಾಡಿಕೊಂಡು ಮಾತನಾಡಿ, ರಾಣಿ ಚೆನ್ನಮ್ಮನ ಆದರ್ಶ, ಧೈರ್ಯ, ಸಾಹಸ, ದೇಶಪ್ರೇಮ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಬಾಬು ಮಿರ್ಜೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.