ಚನ್ನಮ್ಮ ಮಹಿಳಾ ಸಹಕಾರಿ ಸುಭದ್ರ

28..3
ಅಂಕಲಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಸಂಘದ 25ನೇ ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷೆ ಸುನೀತಾ ಕಮತೆ ಮಾತನಾಡಿದರು. ಶೀಲಾ ಹಲವಾಯಿ, ಶುಭಾಂಗಿ ಕೋರೆ, ಅರುಣಾ ಕೋರೆ ಇದ್ದರು.
Published on

ಚಿಕ್ಕೋಡಿ: ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಸಂಘ ಆರ್ಥಿಕವಾಗಿ ಸುಭದ್ರವಾಗಿದ್ದು, ಮಹಿಳಾ ಸದಸ್ಯರು ಗಹ ಉದ್ಯೋಗ ಮಾಡಲು ಸಹಕಾರಿಯಿಂದ ಸಾಲ ಪಡೆದು ಆರ್ಥಿಕವಾಗಿ ಸಬಲರಾಗುವ ಮೂಲಕ ಸಹಕಾರಿ ಅಭಿವೃದ್ಧಿಗೆ ಸಹಕರಿಸುವಂತೆ ಉಪಾಧ್ಯಕ್ಷೆ ಸುನೀತಾ ಕಮತೆ ಹೇಳಿದರು.


ಅಂಕಲಿಯ ಶಿವಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಸಂಘದ 25ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿಯು 6.96 ಸಾವಿರ ರೂ. ಷೇರು ಬಂಡವಾಳ, 7.13 ಕೋಟಿ ರೂ. ಠೇವಣಿ ಹೊಂದಿದೆ. 1.25 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.8 ಲಾಭಾಂಶ ವಿತರಿಸಲಾಗುವುದು ಎಂದರು.

ಅಧ್ಯಕ್ಷೆ ಶೀಲಾ ಹಲವಾಯಿ, ನಿರ್ದೇಶಕಿ ಶುಭಾಂಗಿ ಕೋರೆ, ಅರುಣಾ ಕೋರೆ, ಮನೀಷಾ ಶೆಟ್ಟಿ, ಸಂಜೀವಿನಿ ಕುಂಬಾರ, ಶೋಭಾ ಬುಬನಾಳೆ, ಸುಧಾ ಪಾಟೀಲ, ಸೀಮಾ ಖೋತ, ಶೋಭಾ ಖವಟಕೊಪ್ಪ, ಲಕ್ಷ್ಮೀ ಹಿರೇಕುರುಬರ, ಗಂಗುಬಾಯಿ ನಾಯಕ, ಗಾಯತ್ರಿ ಸನದಿ ಇತರರಿದ್ದರು. ಕಾರ್ಯದರ್ಶಿ ಬಿನಿತಾ ಪಾಟೀಲ ವಾರ್ಷಿಕ ವರದಿ ಓದಿದರು. ಸುನಂದಾ ಮಗದುಮ್ಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net