ಚನ್ನಮ್ಮ ವೃತ್ತ ಅಧಿಕೃತವಾಗಿ ನಾಮಕಾರಣ ಮಾಡಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ನಗರ ಘಟಕ ಮನವಿ

280120 Sindhanuru Appeal for Rani channama Name
Published on

ಸಿಂಧನೂರು: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತವನ್ನು ನಗರಸಭೆಯಿಂದ ಅಧಿಕೃತವಾಗಿ ನಾಮಕರಣ ಮಾಡಬೇಕೆಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ನಗರ ಘಟಕ ಮಂಗಳವಾರ ಮನವಿ ಸಲ್ಲಿಸಿತು.

ನಗರದ ಅಂಚೆ ಕಚೇರಿ ಮುಂಭಾಗದ ಹೆದ್ದಾರಿಯಲ್ಲಿರುವ ವೃತ್ತವನ್ನು 6 ದಶಕಗಳಿಂದ ವಾಡಿಕೆ ಪ್ರಕಾರ ಚನ್ನಮ್ಮ ವೃತ್ತವೆಂದು ಸಾರ್ವಜನಿಕರು ಹಾಗೂ ತಾಲೂಕಿನ ಸರ್ಕಾರಿ ಕಚೇರಿಯಲ್ಲೂ ಕರೆಯಲಾಗುತ್ತಿದೆ. ಈಗಾಗಲೇ ವೃತ್ತದಲ್ಲಿ ಚನ್ನಮ್ಮನವರ ನಾಮಫಲಕ ಅಳವಡಿಸಿ ಪ್ರತಿ ವರ್ಷ ಜಯಂತಿ ಆಚರಿಸಲಾಗುತ್ತಿದೆ. ನಗರಸಭೆ ಅಧಿಕೃತವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತವೆಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

ವೀರಭದ್ರಪ್ಪ ಗಸ್ತಿ, ಮಲ್ಲಿಕಾರ್ಜುನ ಸಾಹುಕಾರ ಕಲ್ಲೂರು, ಶಿವಕುಮಾರ ಕುರುಕುಂದಿ, ಶರಣಪ್ಪ ಮೇದಿಕಿನಾಳ, ನಾಗರಾಜ ಗಸ್ತಿ, ಕೆ.ಬಸವರಾಜ ಗಸ್ತಿ, ನಾಗರಾಜ ಸಿಂಗಾಪುರ, ವಿಜಯಕುಮಾರ ಬಾಗಲಕೋಟೆ, ಆನಂದ ನಂದಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net