ಚೆನ್ನಮ್ಮನ ನಾಟಕ ವೀಕ್ಷಣೆಗೆ ಜನಸಾಗರ

IMG-20230223-WA0088.jpg
Published on


ಬೆಳಗಾವಿ:ತನ್ನ ಪುಟ್ಟ ರಾಜ್ಯ ಕಿತ್ತೂರಿನ ಸಂಸ್ಥಾನ ರಕ್ಷಣೆಗಾಗಿ ಹೋರಾಡಿದ  ವೀರ ರಾಣಿ ಚನ್ನಮ್ಮ ಧೀರತೆಯ ಹಾಗೂ ಜೀವನಾಧಾರಿತ ಬೃಹತ್ ನಾಟಕ ಪ್ರದರ್ಶನ ಚೆನ್ನಮ್ಮನ ಗತವೈಭವನ್ನು ಅನಾವರಣಗೊಳಿಸಿತು.
ನಗರದ ಸಿಪಿಇಎಡ್ ಮೈದಾನದಲ್ಲಿ ಗುರುವಾರದಿಂದ ಆರಂಭಗೊಂಡ ವೀರರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕ ವೀಕ್ಷಣೆಗೆ ನಗರ, ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕುಟುಂಬ ಸದಸ್ಯರು ಸೇರಿದಂತೆ ಜನಸಾಗರವೇ ಹರಿದು ಬಂದಿತ್ತು.  ಸ್ವಾತಂತ್ರೃ ಚಳಿವಳಿಯ ಸಮಯದಲ್ಲಿ ಬ್ರಿಟಿಷರಿಗೆ ಚೆನ್ನಮ್ಮನ ಕೆಚ್ಚೆದೆಯ ಪ್ರತಿರೋಧ ಹಾಗೂ ದೇಶಾಭಿಮಾನ ಮೂಡಿಸುವ ಪ್ರಸಂಗಗಳು ಪ್ರತಿಯೊಂದು ಸನ್ನಿವೇಶಗಳು ಜನರ ಮನಸೆಳೆದವು.
 ರಾಣಿ ಚೆನ್ನಮ್ಮಳ ಘರ್ಜನೆ ಪಾತ್ರಧಾರಿಗಳ ಅಭಿಯನಕ್ಕೆ ಪ್ರೇಕಕರಿಂದ ಚಪ್ಪಾಳೆ ಗಿಟ್ಟಿಸಿತು. ಮತ್ತೊಂದೆಡೆ ನಾಟಕದಲ್ಲಿ ಯುದ್ದ ಸನ್ನಿವೇಶ ಸಂದರ್ಭದಲ್ಲಿ ಪಾತ್ರದಾರಿಗಳಾಗಿ ಬಂದ ಒಂಟಿ, ಆನೆ ಹಾಗೂ ಕುದುರೆಗಳನ್ನು  ಪ್ರೇಕ್ಷಕರು ಪುಳುಕಿತರಾದರು.
 ಸಿಪಿಇಎಡ್ ಮೈದಾನದಲ್ಲಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕಕ್ಕೆ ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಸದೆ ಮಂಗಲಾ ಅಂಗಡಿ, ಡಾ.ರವಿ ಪಾಟೀಲ ಹಾಗೂ ಧಾರವಾಡ ರಂಗಾಯಣ ಪ್ರಧಾನ ನಿರ್ದೇಶಕ ರಮೇಶ ಪರವಿನಾಯ್ಕರ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net