

ಸಿಂಧನೂರು: ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರ 46ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಅಂಗವಾಗಿ ಡಿ.15 ರಂದು ಶ್ರೀ ಶರಣಬಸವೇಶ್ವರ ರಥೋತ್ಸವ ನಡೆಯಲಿದೆ.
ಬೆಳಗ್ಗೆ ಶ್ರೀ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನಂತರ ಲಘು ರಥೋತ್ಸವ ನಡೆಯಲಿದೆ. ಸುಮಂಗಲೆಯರಿಂದ 101 ಕುಂಭ-ಕಳಸ ಮೆರವಣಿಗೆ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ ನೆರವೇರಲಿವೆ.
ಸಂಜೆ ಅದ್ದೂರಿಯಾಗಿ ಶ್ರೀ ಶರಣಬಸವೇಶ್ವರರ ರಥೋತ್ಸವ ನಡೆಯಲಿದೆ. ಮೂರುಮೈಲ್‌ಕ್ಯಾಂಪ್ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ, ಬೂದಗುಂಪ ವಿರಕ್ತಮಠದ ಉತ್ತರಾಧಿಕಾರಿ ಸಿದ್ದೇಶ್ವರ ದೇವರು, ಚನ್ನಳ್ಳಿ ಹಿರೇಮಠದ ಚನ್ನವೀರಯ್ಯಸ್ವಾಮಿ, ಹಂಚಿನಾಳಕ್ಯಾಂಪ್ ಶಿವಲಿಂಗಯ್ಯ ತಾತ, ವೀರಭದ್ರ ಶರಣರು ತಲೇಖಾನ ಹಿರೇಮಠ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಹ್ಲಾದರಡ್ಡಿ ಕೆಂಗಲ್ ತಿಳಿಸಿದ್ದಾರೆ.