ಚನ್ನಕೇಶವಸ್ವಾಮಿ ಮೂರ್ತಿ ಮೆರವಣಿಗೆ

ವಿಜಯದಶಮಿ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತಂದು ಬಂಟೇನಹಳ್ಳಿಯ ಬನ್ನಿ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು.
ವಿಜಯದಶಮಿ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತಂದು ಬಂಟೇನಹಳ್ಳಿಯ ಬನ್ನಿ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು.
Published on

ಬೇಲೂರು: ವಿಜಯದಶಮಿ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇವರ ಮೂರ್ತಿಯನ್ನು ಅಶ್ವಾರೂಢ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣ ಸಮೀಪದ ಬಂಟೇನಹಳ್ಳಿಯ ಬನ್ನಿ ಮಂಟಪದವರೆಗೆ  ಮೆರವಣಿಗೆ ಮಾಡಲಾಯಿತು.

ಶ್ರೀ ಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ಅರ್ಚಕರು ಭಕ್ತರೊಂದಿಗೆ ಶ್ರೀ ಚನ್ನಕೇಶವಸ್ವಾಮಿ ದೇಗುಲದಿಂದ ಪಟ್ಟಣದ ಮುಖ್ಯರಸ್ತೆ ಮೂಲಕ ಸಮೀಪದ ಬಂಟೇನಹಳ್ಳಿಯಲ್ಲಿರುವ ಬನ್ನಿ ಮಂಟಪಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಪೂಜೆ ಸಲ್ಲಿಸಲಾಯಿತು. ನಂತರ ದೇಗುಲದ ಸಾಂಪ್ರದಾಯದಂತೆ ಮಂಟಪದ ಸಮೀಪವಿರುವ ಬನ್ನಿ ಮರದ ಬುಡದಲ್ಲಿ ದೇಗುಲದ ವಿವಿಧ ಆಯುಧಗಳು, ಗಣಘ ಗುಡಿಯ ಕೊಠಡಿ ಹಾಗೂ ದೇಗುಲದಲ್ಲಿರುವ ಹಲವಾರು ಕೊಠಡಿಗಳ ಬೀಗದ ಕೀಗಳು ಸೇರಿದಂತೆ ಇತರೆ ಪರಿಕರಗಳನ್ನಿಟ್ಟು ಬನ್ನಿ ಮರದೊಂದಿಗೆ ಅರ್ಚಕರು ಪೂಜೆ ಸಲ್ಲಿಸಿದರು.

ನಂತರ ಬನ್ನಿ ಮರದ ಸೊಪ್ಪನ್ನು ಕಡಿದು ಪ್ರಥಮವಾಗಿ ದೇವರಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೂಜೆಗಾಗಿ ಮಂಟಪದ ಹತ್ತಿರ ನೆರೆದಿದ್ದ ನೂರಾರು ಭಕ್ತರಿಗೆ ಬನ್ನಿ ಸೊಪ್ಪನ್ನು ವಿತರಿಸಲಾಯಿತು. ಇದೇ ಸಂದರ್ಭ ವಿಜಯದಶಮಿ ಅಂಗವಾಗಿ ಬನ್ನಿ ಮಂಟಪದ ದೇವರ ಪೂಜೆಗೆ ಆಗಮಿಸಿದ್ದ ನೂರಾರು ಭಕ್ತರಿಗೆ ಪ್ರತಿ ವರ್ಷದಂತೆ ಅರುಸು ವಂಶಸ್ಥರು ಪ್ರಸಾದ ವಿತರಿಸಿದರು.

ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ದೇಗುಲದ ಇಒ ಯೋಗೀಶ್, ಅರ್ಚರ ನರಸಿಂಹ ಪ್ರಿಯ ಭಟ್ಟರ್ ಹಾಗೂ ಕಂದಾಯ ಇಲಾಖೆಯ ನಟರಾಜ್, ಹನುಮಂತು, ಅಡ್ಡೆಗಾರರು ಸೇರಿದಂತೆ ನೂರಾರು ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net