ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವು

676f9d9c-9293-4459-b882-3288f855e16f
Published on

ಶಿವಮೊಗ್ಗ: ತಾಲೂಕಿನ ಆಯನೂರು ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಚನ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಮೆಕ್ಕೆಜೋಳದ ಹೊಲಕ್ಕೆ ನುಗ್ಗಿರುವ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿವೆ.

ಚನ್ನಹಳ್ಳಿಯ ಚಂದ್ರನಾಯ್ಕ ಅವರ ಜಮೀನಿನಲ್ಲಿ ಸುಮಾರು 20 ಮತ್ತು 22 ವರ್ಷದ ಕಾಡಾನೆಗಳು ಸಾವನ್ನಪ್ಪಿವೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಅರಣ್ಯದಂಚಿನ ಭಾಗದಲ್ಲಿ ರೈತರು ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದು ಮೆಕ್ಕೆಜೋಳದ ಹೊಲಕ್ಕೆ ಬಂದ ಕಾಡಾನೆಗಳು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿವೆ.

ಇದೇ ವೇಳೆ ಆಯನೂರು, ಇಟ್ಟಿಗೆಹಳ್ಳಿ, ಗೌಡನಕೆರೆ, ಸಿರಿಗೆರೆ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಜನರು ಆನೆಗಳನ್ನು ನೋಡಲು ತೆರಳಿದ್ದರು.ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಮೀನಿನ ಮಾಲೀಕ ಚಂದ್ರನಾಯ್ಕ ತಲೆಮರೆಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net