ದೇಗುಲಗಳು ಶಾಂತಿ, ನೆಮ್ಮದಿಯ ತಾಣ

Channagiri, temple, restoration,
Published on

ಎಸ್‌ಕೆಡಿಆರ್‌ಪಿ ಯೋಜನಾಧಿಕಾರಿ ಪ್ರವೀಣ್ ಅಭಿಪ್ರಾಯ I ಮಿಯಾಪುರದ ದೇವಸ್ಥಾನಕ್ಕೆ ನೆರವು

ಚನ್ನಗಿರಿ: ದೇವಸ್ಥಾನಗಳು ಶಾಂತಿ, ನೆಮ್ಮದಿಯ ತಾಣಗಳಾಗಿವೆ ಎಂದು ಸಂತೇಬೆನ್ನೂರು ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ತಿಳಿಸಿದರು.

ತಾಲೂಕು ಮಿಯಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಸೇವಾಲಾಲ್, ಶ್ರೀ ತುಳಜಾ ಭವಾನಿ ದೇವಸ್ಥಾನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1 ಲಕ್ಷ ಚೆಕ್ ಅನ್ನು ಸೋಮವಾರ ಹಸ್ತಾಂತರಿಸಿ ಮಾತನಾಡಿದರು.

ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಹೋದರೆ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತವೆ ಎಂದರು.

ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಿಸಲು ಮುಂದೆ ಬಂದ ಪ್ರತಿ ಗ್ರಾಮ ಮತ್ತು ಪಟ್ಟಣಗಳಿಗೆ ಸಹಾಯಧನ ನೀಡುತ್ತ ಬಂದಿದ್ದಾರೆ. ಶಿಥಿಲಾವಸ್ಥೆ ತಲುಪಿದ ಹಳೇ ದೇಗುಲಗಳ ದುರಸ್ತಿ ಮಾಡುವವರ ಜತೆಗೆ ಧರ್ಮಸ್ಥಳ ಸಂಸ್ಥೆ ಕೈಜೋಡಿಸುತ್ತಿದೆ ಎಂದರು.

ದೇಗುಲ ನಿರ್ಮಾಣ ಸುಲಭ. ಅದರ ನಿರ್ವಹಣೆ ಕಷ್ಟದ ಕೆಲಸ. ನಿರ್ಮಾಣವಾದ ಬಳಿಕ ನಿತ್ಯವೂ ಪೂಜಾ ಕಾರ್ಯಗಳು, ಸ್ವಚ್ಛತೆ ಕಾಪಾಡುವುದು ಆಗಬೇಕು. ಆ ಕ್ಷೇತ್ರ ಎಲ್ಲ ವಿಧದಲ್ಲೂ ಉತ್ತಮ ಪರಿಸರ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಮುಂದಿನ ಪೀಳಿಗೆ ದೇವರನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಗ್ರಾಮದಲ್ಲಿ ಒಂದು ದೇಗುಲ ಇದ್ದರೆ ಗ್ರಾಮಕ್ಕೆ ಕಳಸವಿದ್ದಂತೆ. ಧಾರ್ಮಿಕತೆಯ ಸಂಕೇತವೇ ದೇವಾಲಯಗಳು ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಪರಮೆಶ್ವರಪ್ಪ, ಉಪಾಧ್ಯಕ್ಷ ಎಂ.ಬಿ.ಮಂಜುನಾಥ್, ಕಾರ್ಯದರ್ಶಿ ಡಿ.ರುದ್ರನಾಯ್ಕ, ಸಹಕಾರ್ಯದರ್ಶಿ ಎಂ.ಮಂಜನಾಯ್ಕ, ಖಜಾಂಚಿ ಎಸ್.ಅರ್.ಉಮಾಪತಿ, ಧರ್ಮಸ್ಥಳ ಸಂಸ್ಥೆ ವಲಯ ಮೇಲ್ವಿಚಾರಕ ಮನೋಜ್, ಸೇವಾಪ್ರತಿನಿಧಿ ಟಿ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net