ಈಜಲು ತೆರಳಿದ ಇಬ್ಬರು ನೀರುಪಾಲು

Crime Logo (2)
Published on

ಚನ್ನಗಿರಿ: ತಾಲೂಕಿನ ಸೋಮನಹಾಳ್ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ಗುರುವಾರ ಈಜಲು ತೆರಳಿದ್ದ ಒಬ್ಬ ಬಾಲಕ ಸೇರಿದಂತೆ ಇಬ್ಬರು ನೀರುಪಾಲಾಗಿದ್ದಾರೆ.

ಚನ್ನಗಿರಿ ಪಟ್ಟಣದ ಎ.ಕೆ. ಕಾಲನಿಯ ಚಿನ್ಮಯ್ (15) ಮತ್ತು ರಂಗಪ್ಪ (25) ನೀರುಪಾಲಾದವರು.

ಬೆಳಗ್ಗೆ ಚಿನ್ಮಯ್, ರಂಗಪ್ಪ ಹಾಗೂ ಗಗನ್ ಒಂದೇ ಬೈಕ್‌ನಲ್ಲಿ ಈಜಾಡುವ ಉದ್ದೇಶದಿಂದ ಹೊರಟರು. ಆದರೆ ಗಗನ್ ದೇವರಹಳ್ಳಿಗೆ ಬರುತ್ತಿದ್ದಂತೆಯೆ ಮನಸ್ಸು ಬದಲಿಸಿ ಬೈಕ್‌ನಿಂದ ಇಳಿದು ಚನ್ನಗಿರಿಗೆ ಬಸ್‌ನಲ್ಲಿ ವಾಪಸಾದ.

ಉಳಿದ ಇಬ್ಬರು ಮೊದಲೇ ಅಂದುಕೊಂಡಂತೆ ಸೋಮನಹಾಳ್ ಗ್ರಾಮದ ಬಳಿಯ ಭದ್ರಾ ಕಾಲುವೆ ವರೆಗೆ ಹೋಗಿ ನೀರಿಗಿಳಿದಾಗ ಈ ದುರ್ಘಟನೆ ಸಂಭವಿಸಿದೆ. ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ವರೆಗೂ ಶೋಧ ಕಾರ್ಯ ಮುಂದುವರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net