2 ಕೋಟಿ ವೆಚ್ಚದಲ್ಲಿ ಕಸದ ಬುಟ್ಟಿ ವಿತರಣೆ

CHANNAGIRI
Published on

ಚನ್ನಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಾವಣಗೆರೆಯ ಜಿಲ್ಲೆಯ 800 ದೇವಾಲಯಗಳಿಗೆ 2 ಕೋಟಿ ರೂ. ವೆಚ್ಚದಲ್ಲಿ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ ಎಂದು ಯೋಜನಾ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ತಿಳಿಸಿದರು.

ಪಟ್ಣದ ಗಣಪತಿ ವೃತ್ತದಲ್ಲಿರುವ ಶ್ರೀ ವಿನಾಯಕ ದೇವಾಲಯಕ್ಕೆ ಭಾನುವಾರ ಕಸದ ಬುಟ್ಟಿ ವಿತರಿಸಿ ಮಾತನಾಡಿದರು.

ದೇಗುಲಕ್ಕೆ ಬರುವ ಭಕ್ತರು ಕಸದ ಬುಟ್ಟಿಯಲ್ಲೇ ಪೇಪರ್ ಮತ್ತಿತರ ತ್ಯಾಜ್ಯಗಳನ್ನು ಹಾಕಬೇಕು. ಎಲ್ಲೆಂದರಲ್ಲಿ ಎಸೆಯಬಾರದು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಲತಿ ದಿನೇಶ್ ಮಾತನಾಡಿ, ತಾಲೂಕಿನ 141 ದೇವಾಲಯಗಳಿಗೆ 282 ಕಸದ ಬುಟ್ಟಿ ನೀಡಲಾಗುತ್ತಿದೆ ಎಂದರು.

ಪುರಸಭೆ ಆರೋಗ್ಯ ಅಧಿಕಾರಿ ಶಿವರುದ್ರಪ್ಪ, ಸದಸ್ಯೆ ಸವಿತಾ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಸಿಬ್ಬಂದಿ ಮೌನೇಶ್, ರಾಘವೇಂದ್ರ, ಗೋವಿಂದಪ್ಪ, ಸಂಸ್ಥೆ ಮೇಲ್ವಿಚಾರಕಿ ಪ್ರತಿಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net