ಲಿಂಗಾಯತ ಧರ್ಮಕ್ಕೆ ಸಾಂವಿಧಾನಾತ್ಮಕ ಮಾನ್ಯತೆ ಮಹಾಸಭಾದ ಉದ್ದೇಶ

Channagiri, Shravana, Lingayatism,
Published on

ಚನ್ನಗಿರಿ: ಲಿಂಗಾಯತ ಧರ್ಮ ಸ್ವತಂತ್ರವಾದುದು. ಇದಕ್ಕೆ ಸಾಂವಿಧಾನಾತ್ಮಕ ಮಾನ್ಯತೆ ಪಡೆಯುವುದು ಮಹಾಸಭಾದ ಮುಖ್ಯ ಉದ್ದೇಶ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಸಣಿಕೆರೆ ಗ್ರಾಮದಲ್ಲಿ ಮಂಗಳವಾರ ತಾಲೂಕು ಜಾಗತಿಕ ಮಹಾಸಭಾದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಬಂತು ಅನುಭಾವ ತಂತು ಎರಡನೇ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮ ಹಿಂದು ಧರ್ಮದ ವ್ಯಾಪ್ತಿಯಲ್ಲಿ ಸೇರುವುದಿಲ್ಲ ಎಂದರು.

ಹಿರೇಕೋಗಲೂರಿನ ಜಾನಪದ ಚಿಂತಕ ಶರಣಪ್ಪ ಮಾತನಾಡಿ, ಶರಣರ ತತ್ವ ಸಿದ್ಧಾಂತ, ಆದರ್ಶ ಹಾಗೂ ಸಾಮಾಜಿಕ ಚಿಂತನೆಗಳನ್ನು ವಚನಕಾರರು ನೀಡಿದ್ದಾರೆ. ಅವುಗಳನ್ನು ನಾವು ಮುಂದುವರಿಸಿದಲ್ಲಿ ಸಮಾಜದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಂತೆ ಆಗುತ್ತದೆ ಎಂದರು.

ದಾಸೋಹಿ ನಟರಾಜ್ ಮಸಣಿಕೆರೆ, ತಾಲೂಕು ಜಾಗತಿಕ ಮಹಾಸಭಾದ ಅಧ್ಯಕ್ಷ ಎನ್.ರಾಜಪ್ಪ, ಕಾರ್ಯಾಧ್ಯಕ್ಷ ಎಂ.ಯು.ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸಿವಮೂರ್ತಿ, ಕಗ್ಮಾ ಅಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ ವಡ್ನಾಳ್ ಜಗದೀಶ್, ಕಾಕನೂರು ಎಂ.ಬಿ.ನಾಗರಾಜ್, ಧನಂಜಯ, ಚಿಕ್ಕಣ್ಣ, ರುದ್ರೇಶ ಆಚಾರ್, ಪಂಚಾಕ್ಷರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net