ವರುಣನ ಕೃಪೆಗಾಗಿ ಕುಕ್ಕುವಾಡೇಶ್ವರಿಗೆ ಜಲಾಭಿಷೇಕ

Channagiri, Rain, Puja,
Published on

ಚನ್ನಗಿರಿ: ವರುಣನ ಕೃಪೆಗೆ ಪ್ರಾರ್ಥಿಸಿ ಮರಾಠ ಸಮುದಾಯದವರು ಸೋಮವಾರ ಶ್ರೀ ಕುಕ್ಕುವಾಡೇಶ್ವರಿ ದೇವಿಗೆ ಜಲಾಭಿಷೇಕ ಮಾಡಿದರು.

ಮುತ್ತೈದೆಯರು ಕುಂಭ ಮೆರವಣಿಗೆ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನಕ್ಕೆ ಆಗಮಿಸಿತು. ಕುಂಭದಲ್ಲಿ ತಂದ ನೀರನ್ನು ದೇವಿಗೆ ಅಭಿಷೇಕ ಮಾಡಲಾಯಿತು.

ಇದಕ್ಕೂ ಮೊದಲು ಪಟ್ಟಣದ ಮೈಲಾರೇಶ್ವರ, ಕಾಳಿಕಾಂಬಾ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಗರ ದೇವತೆ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮುತ್ತೈದೆಯರು ರಾತ್ರಿಯಿಂದ ಉಪವಾಸ ಆಚರಿಸಿದರು.

ಮರಾಠ ಸಮುದಾಯದ ಅಧ್ಯಕ್ಷ ನಿಂಗೋಜಿರಾವ್ ಮಾತನಾಡಿ, ಮೇ ತಿಂಗಳಲ್ಲಿ ಮುಂಗಾರು ಆರಂಭವಾಗಬೇಕಿದ್ದ ಈವರೆಗೂ ಸುಳಿವು ಇಲ್ಲದಂತಾಗಿದೆ. ಜುಲೈನಲ್ಲಿ ಬಂದ ಮಳೆ ನಂಬಿ ರೈತರು ಸಂತಸದಿಂದ ಬಿತ್ತನೆ ಮಾಡಿದ್ದರು. ನಂತರ ಬರಲೇ ಇಲ್ಲ. ಈಗ ಬೀಜಗಳು ಮೊಳಕೆ ಒಡೆದು ಒಂದು ಅಡಿಯಷ್ಟು ಎತ್ತರ ಬೆಳೆದು ನಿಂತಿದೆ. ಮಳೆ ಬರದಿದ್ದರೆ ಜೀವನ ನಡೆಸುವುದು ಕಷ್ಟ ಎಂದರು.

ಮುಖಂಡರಾದ ಕುಬೇಂದ್ರೋಜಿರಾವ್, ಉಪಾಧ್ಯಕ್ಷ ಕಾಯಿ ಮಂಜಣ್ಣ, ನಾಗರಾಜಾರಾವ್, ಪೂಜಾರ್ ಮಲ್ಲೋಜಿರಾವ್, ಕಾಫಿಪುಡಿ ಶಿವಾಜಿರಾವ್, ಪುರಸಭೆ ಸದಸ್ಯ ಮಂಗಳಮ್ಮ, ನೇತಾಜಿರಾವ್, ರಂಗನಾಥರಾವ್, ಶಾಂತಮ್ಮ, ಪಾರ್ವತಿಬಾಯಿ, ನೇತ್ರಾವತಿ, ಭೀಮೋಜಿರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net