ಕಲಿಕೆಗೆ ಉತ್ತೇಜನ ಸಿಕ್ಕರೆ ಉತ್ತಮ ಫಲಿತಾಂಶ

Channagiri, workshop,
Published on

ಚನ್ನಗಿರಿ: ಮಕ್ಕಳ ಸ್ವಂತ ಕಲಿಕಾ ಸಾಧನೆಗೆ ಮನ್ನಣೆ ನೀಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಗುಣೇಶ್ ಭಾರತೀಯ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಗ್ರಾಮದ ಚೈತನ್ಯ ಗುರುಕುಲ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವ್ತಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಪ್ರೇರಣಾತ್ಮಕ ಕಾರ್ಯಾಗಾರದಲ್ಲಿ ಮಾತನಾಡಿದರು.

ವ್ಯಕ್ತಿತ್ವ ವಿಕಸನವು ವ್ಯಕ್ತಿಯ ಮನಸ್ಥಿತಿ ಮತ್ತು ಕೌಶಲಗಳ ವೃದ್ಧಿಸುವ ಗುರಿ ಹೊಂದಿರುವ ಪರಿವರ್ತನೆಯ ಪ್ರಕ್ರಿಯೆ. ಇಂದಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಆಕರ್ಷಕ ವ್ಯಕ್ತಿತ್ವ ರೂಪಿಸಲು ನೆರವಾಗುವ ವಿಧಾನ ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ ಎಂದರು.

ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳು, ಲವಲವಿಕೆ ಮತ್ತು ದೈಹಿಕ ಸದೃಢತೆ ಸಾಧಿಸಲು ಸಾಧ್ಯ ಎಂದರು. ಕಾರ್ಯಾಗಾರದಲ್ಲಿ 850 ಮಕ್ಕಳು ಭಾಗಿಯಾಗಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್.ಆರ್. ನಾಗರಾಜ್, ದಾವಣಗೆರೆ ಇಸಿಒ ಆರ್. ಚೇತನಾ, ಮುಖ್ಯಶಿಕ್ಷಕಿ ಅಂಬಿಕಾ, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net