ಚನ್ನಗಿರಿಯ ಆರು ಕೆರೆಗಳಿಗೆ ಶೀಘ್ರ ನೀರು

Davanagere Channagiri, Medukondanahalli, visit, inspection,
Published on

ಚನ್ನಗಿರಿ: ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಆರು ಗ್ರಾಮಗಳಿಗೆ ನೀರು ಪೂರೈಸುವ ಮೇದುಗೊಂಡನಹಳ್ಳಿ ಜಂಕ್ಷನ್‌ಗೆ ಶುಕ್ರವಾರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮೇದುಗೊಂಡನಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದೆ. ಇದರಿಂದ ಗೊಪ್ಪೇನಹಳ್ಳಿ, ವಡ್ನಾಳ್, ವಿ.ಬನ್ನಿಹಟ್ಟಿ, ಹೆಬ್ಬಳಗೆರೆ, ಬೆಂಕಿಕೆರೆ, ಹೊದಿಗೆರೆ ಗ್ರಾಮಗಳ ಕೆರೆಗಳಿಗೆ ನೀರು ಹರಿಸಲಾಗುವುದು. 9.45 ಕೋಟಿ ಹಣ ಸರ್ಕಾರದಿಂದ ಮಂಜೂರಾಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕರು ಹೇಳಿದರು.

ತುಮ್ಕೋಸ್ ನಿರ್ದೇಶಕ ಗಂಗಣ್ಣ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರುದ್ರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿಗ್ಗೇನಹಳ್ಳಿ ನಾಗರಾಜ್, ನೀರಾವರಿ ನಿಗಮದ ಇಂಇನಿಯರ್‌ಗಳಾದ ಶಶಿಕಾಂತ್, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net