

ಚನ್ನಗಿರಿ: ತಾಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಶೃಂಗಾರಭಾಗು ಗ್ರಾಮದ ಮೆಕ್ಕೆಜೋಳ ಬೆಳೆಯ ನಡುವೆ ಬೆಳೆದಿದ್ದ 30 ಕೆಜಿ 400 ಗ್ರಾಂ ತೂಕದ ಹಾಗೂ 1.50 ಲಕ್ಷ ರೂ. ಮೌಲ್ಯದ ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ.
ಶೃಂಗಾರಭಾಗು ಗ್ರಾಮದ ಹನುಮಂತಪ್ಪ ಎಂಬುವರು ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ನಡುವೆ 130 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಇವೆಲ್ಲವನ್ನೂ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆರೋಪಿ ಹನುಮಂತಪ್ಪ ತಲೆಮರೆಸಿಕೊಂಡಿದ್ದಾನೆ.
ಜಿಲ್ಲಾ ಉಪ ಆಯುಕ್ತ ಶಿವಪ್ರಸಾದ, ಚನ್ನಗಿರಿ ಅಬಕಾರಿ ಇನ್ಸ್‌ಪೆಕ್ಟರ್ ನೌಷದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.