

ಚನ್ನಗಿರಿ: ಛತ್ರಪತಿ ಶಿವಾಜಿ ಮಹಾರಾಜ್ ದೇಶದಲ್ಲಿ ಹಿಂದುಗಳ ರಕ್ಷಣೆಗಾಗಿ ಜೀವ ನೀಡಿದ ಮಹಾತ್ಮ ಎಂದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಡಾಳು ಮಲ್ಲಿಕಾರ್ಜುನ ತಿಳಿಸಿದರು.
ಶ್ರೀ ಕ್ಷತ್ರಿಯ ಮರಾಠ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಕ್ಷತ್ರಿಯ ಮರಾಠ ಸಮಾಜ, ಶ್ರೀ ಛತ್ರಪತಿ ಶಿವಾಜಿ ಯುವಕರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಮೊಗಲರ ವಿರುದ್ಧ ಹೋರಾಡುತ್ತಾ ವೀರ ಮರಣ ಹೊಂದಿದ ಶಿವಾಜಿ ಅವರ ಜಯಂತಿಯನ್ನು ಜಾತಿ, ಧರ್ಮ ಮರೆತು ಆಚರಿಸುವಂತೆ ಆಗಬೇಕು ಎಂದು ಹೇಳಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್, ಮರಾಠ ಸಮಾಜದ ತಾಲೂಕು ಅಧ್ಯಕ್ಷ ನಿಂಗೋಜಿರಾವ್ ಕೇಸರ್‌ಕರ್, ಗೌರವಾಧ್ಯಕ್ಷ ಎಂ.ಬಿ.ಸುಬ್ಬೋಜಿರಾವ್ ಜಾಧವ್, ಪುರಸಭೆ ಸದಸ್ಯೆ ಸರ್ವಮಂಗಳ, ಜಯಲಕ್ಷ್ಮಿ, ಮಾಜಿ ಸದಸ್ಯೆ ಲಕ್ಷ್ಮಿ ರುದ್ರೋಜಿರಾವ್, ಜೀಜಾಮಾತಾ ಸಂಘದ ಅಧ್ಯಕ್ಷೆ ಲತಾ ಮಂಜುನಾಥ್ ಕಾಳೆ, ಸಮಾಜದ ಮುಖಂಡ ಕುಬೇಂದ್ರೋಜಿರಾವ್ ಇತರರಿದ್ದರು.