ಕೋಗಲೂರು ಕೆರೆ ವೀಕ್ಷಿಸಿದ ಲೋಕಾ ಡಿಎಸ್ಪಿ

chn kogalore july 09 (2)
Published on

ಚನ್ನಗಿರಿ: ಕೆರೆಗಳ ಒತ್ತುವರಿ ತೆರವು ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಭದ್ರಾ ಮೇಲ್ದಂಡೆ ದಾವಣಗೆರೆ ವಿಭಾಗ ಹಾಗೂ ಕರ್ನಾಟಕ ಲೋಕಾಯುಕ್ತ ಡಿಎಸ್‌ಪಿ ಜೆ.ಸಿ.ರವಿ ಗುರುವಾರ ತಾಲೂಕಿನ ಕೋಗಲೂರು ಗ್ರಾಮದ ಕೆರೆ ವೀಕ್ಷಿಸಿದರು.

ಕೆರೆಗಳಿದ್ದರೆ ಅಂತರ್ಜಲ ಹೆಚ್ಚಾಗಿ ಸುತ್ತಮುತ್ತಲ ಕೊಳವೆಬಾವಿಗಳಿಗೆ ನೀರು ಸಿಗುತ್ತದೆ. ಇದರಿಂದ ಗ್ರಾಮ ಹಾಗೂ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಅನೂಕೂಲವಾಗುತ್ತದೆ. ಆದರೆ ಅಭಿವೃದ್ಧಿ ಹೆಸರಲ್ಲಿ ಕೆರೆಗಳ ಒತ್ತುವರಿ ಮಾಡಲಾಗುತ್ತಿದ್ದು, ಇದರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನ ಸೂಳೆಕೆರೆ ಏಷ್ಯಾದಲ್ಲೇ 2ನೇ ದೊಡ್ಡಕೆರೆಯಾಗಿದ್ದು, ಸಾವಿರಾರು ಎಕರೆಗೆ ನೀರು ಒದಗಿಸಲಾಗುತ್ತಿದೆ. ಲಕ್ಷಾಂತರ ಜನರು ಕೆರೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಇಂಥಹ ಕೆರೆ ಉಳಿಸಿಕೊಂಡು ಹೋಗಬೇಕಾದರೆ ಸಂತೇಬೆನ್ನೂರು ವ್ಯಾಪ್ತಿಯಲ್ಲಿ 6 ಹಾಗೂ ಬಸವಾಪಟ್ಟಣ ಹೋಬಳಿಯ ನಲ್ಕುದುರೆ ಗ್ರಾಮದ ಒಂದು ಕೆರೆಗಳು ಮುಖ್ಯ ಹಾಗೂ ಮಧ್ಯಮ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುತ್ತದೆ. ಆ ಕೆರೆಗಳ ದಾಖಲೆ ರಕ್ಷಿಸಿ ಒತ್ತುವರಿಯಾಗಿದ್ದರೆ ತೆರವು ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಭದ್ರಾ ನಾಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎಂ.ಗುಡ್ಡಪ್ಪ, ಸಹಾಯಕ ಇಂಜಿನಿಯರ್ ಎಚ್.ತಿಪ್ಪೇಸ್ವಾಮಿ, ವಿಜಯಕುಮಾರ್, ಲೋಕಾಯುಕ್ತ ಸಿಪಿಐ ಮುರುಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net