

ಚನ್ನಗಿರಿ: ತಾಲೂಕಿನ ಕಾಕನೂರಿನ ಜಮೀನೊಂದರ ಕೃಷಿ ಹೊಂಡದಲ್ಲಿ ಬುಧವಾರ ಬೆಳಗ್ಗೆ ಅದೇ ಗ್ರಾಮದ ಭೈರೇಶ್(38) ಎಂಬಾತ ಶವವಾಗಿ ಪತ್ತೆಯಾಗಿದ್ದು, ಆತನ ತಂದೆ ಯೋಗೇಶಪ್ಪ ಕೊಲೆ ಶಂಕಿಸಿ ಸಂತೇಬೆನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ದನ ಮೇಯಿಸಲೆಂದು ಹೋದ ಭೈರೇಶ್, ಸಂಜೆಯಾದರೂ ಮನೆಗೆ ವಾಪಸಾಗದೆ ಮನೆಯವರೆಲ್ಲ ಆತಂಕಗೊಂಡಿದ್ದರು.
ಮರುದಿನ ಬೆಳಗ್ಗೆ ಪರಮೇಶ್ವರಪ್ಪ ಎಂಬುವರ ಕೃಷಿ ಹೊಂಡದಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಡಿಎಸ್‌ಪಿ ಪ್ರಶಾಂತ್ ಮನ್ನೋಳಿ, ಸಿಪಿಐ ಆರ್. ಪಾಟೀಲ್ ಹಾಗೂ ಪಿಎಸ್‌ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿದ್ದರು.