

ಚನ್ನಗಿರಿ: ಶಾಸಕ ಬಸವರಾಜ್ ಶಿವಗಂಗಾ ಸೋಮವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಬಾಡೂಟದಿಂದ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದರು.
ತಾಲೂಕಿನ ರಾಜಗೊಂಡನಹಳ್ಳಿ ಗ್ರಾಮದಲ್ಲಿ ಜು. 4 ರಂದು ನಡೆದ ಕಾರ್ಯಕ್ರಮದಲ್ಲಿ ಬಾಡೂಟ ಸೇವಿಸಿ 40 ಜನರು ಅಸ್ವಸ್ಥರಾಗಿದ್ದರು. ವಾಂತಿ, ಭೇದಿಯಿಂದ ಬಳಲುತ್ತಿದ್ದವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಈ ವೇಳೆ ಮಾತನಾಡಿದ ಶಾಸಕ ಬಸವರಾಜ್ ಶಿವಗಂಗಾ, ಗ್ರಾಮದಲ್ಲಿ ಈಗಾಗಲೇ ವೈದ್ಯಕೀಯ ಶಿಬಿರ ಆಯೋಜಿಸಿ, ಪ್ರತಿ ಮನೆಯ ಸದಸ್ಯರನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಮರವಂಜಿ ಗ್ರಾಮದಲ್ಲಿ ಡೆಂೆ ಜ್ವರಕ್ಕೆ ಒಬ್ಬರು ಮೃತಪಟ್ಟಿದ್ದಾರೆ. ಗ್ರಾಮವನ್ನು ಪಂಚಾಯಿತಿಯವರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ರಸ್ತೆ ಇಕ್ಕೆಲಗಳ ಚರಂಡಿಗಳಿಗೆ ಬ್ಲೀಚಿಂಗ್ ಹಾಕಬೇಕು. ಸ್ವಚ್ಛತೆ ಕಾಪಾಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಪುರಸಭೆ ಸದಸ್ಯ ನಿಂಗಪ್ಪ, ಪಾಂಡೋಮಟ್ಟಿ ರವಿಕುಮಾರ್, ಮಹೇಶ್ ಇದ್ದರು.
ಜುಲೈ 4 ರಂದು ರಾಜಗೊಂಡನಹಳ್ಳಿ ಗ್ರಾಮದ ಮೂವರು ವಾಂತಿ ಆಗುತ್ತಿದೆ ಎಂದು ಆಸ್ಪತ್ರೆಗೆ ಬಂದು ದಾಖಲಾದರು. ನಂತರ ಅವರ ಸಂಖ್ಯೆ 40 ಕ್ಕೆ ಏರಿತು. ರೋಗಿಗಳ ರಕ್ತ ಮತ್ತು ಊಟವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅಸ್ವಸ್ಥತೆಯ ಕಾರಣ ತಿಳಿಯಲಿದೆ.
l ಡಾ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ, ಚನ್ನಗಿರಿ.