

ಚನ್ನಗಿರಿ: ತಾಲೂಕಿನ ಕಾಕನೂರು-ಕೊಂಡದಹಳ್ಳಿ ನಡುವಿನ ಹಿರೇಹಳ್ಳದ ಚೆಕ್‌ಡ್ಯಾಂ ದಾಟುವಾಗ ಎತ್ತಿನಗಾಡಿ ಹಳ್ಳಕ್ಕೆ ಬಿದ್ದು ಒಂದು ಎತ್ತು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ದೇವರಹಳ್ಳಿ ಗ್ರಾಮದ ರೈತ ತೋಪೇನಹಳ್ಳಿ ಹನುಮಂತಪ್ಪ ಎತ್ತಿನಗಾಡಿಯಲ್ಲಿ ತೋಟಕ್ಕೆ ಹೋಗುವಾಗ ಹಳ್ಳದಲ್ಲಿ ಉರುಳಿ ಬಿದ್ದಿದ್ದು, ಬಂಡಿ ಹಳ್ಳದಲ್ಲಿ ತೇಲಿ ಹೋಗಿದೆ. ಒಂದು ಎತ್ತು ಹೇಗೋ ಪಾರಾಗಿ ದಡ ಸೇರಿದೆ.
ಸ್ಥಳಕ್ಕೆ ತಹಸೀಲ್ದಾರ್ ಪಟ್ಟರಾಜುಗೌಡ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.