

ವಾಹನಗಳ ನಿಲುಗಡೆಗೆ ವ್ಯವಸ್ಥೆ: ಶೋಭಾಯಾತ್ರೆ ವೀಕ್ಷಿಸಲು ಆಗಮಿಸಿದ್ದ ಜನರ ವಾಹನಗಳ ನಿಲುಗಡೆಗೆ ಪಟ್ಟಣದ ಸುತ್ತ ವ್ಯವಸ್ಥೆ ಮಾಡಲಾಗಿತ್ತು. ಸಂತೇಬೆನ್ನೂರು, ತಾವರೆಕೆರೆ, ಚಿತ್ರದುರ್ಗ, ಹೊಳಲ್ಕೆರೆ ಭಾಗಗಳಿಂದ ಬಂದವರಿಗೆ ಕೆರೆ ಏರಿ ಚೌಡಮ್ಮನ ದೇವಸ್ಥಾನ ಮತ್ತು ಶಿವಮೊಗ್ಗ, ಭದ್ರಾವತಿ, ದಾವಣಗೆರೆ ಭಾಗದವರಿಗೆ ಎಪಿಎಂಸಿ ಪ್ರಾಂಗಣದಲ್ಲಿ ಜಾಗ ನಿಗದಿ ಮಾಡಲಾಗಿತ್ತು. ಪಟ್ಟಣದ ನಿವಾಸಿಗಳಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಬಂದೋಬಸ್ತ್‌ಗೆ 400 ಪೊಲೀಸರು
ಚನ್ನಗಿರಿ ಪಟ್ಟಣದ ಸೂಕ್ಷ ್ಮ ಪ್ರದೇಶಗಳನ್ನು ಗುರುತಿಸಿ 30 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಡಿವೈಎಸ್‌ಪಿ 2, ಸಿಪಿಐ 5, ಪಿಎಸ್‌ಐ 19, ಕೆಎಎಸ್ ಆರ್‌ಪಿ 4 ತುಕಡಿ, ಡಿಆರ್ 2 ಮತ್ತಿತರರು ಸೇರಿ 400 ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು ಎಂದು ಸಿಪಿಐ ಪಿ.ಬಿ.ಮಧು ತಿಳಿಸಿದರು.