ಏಕತಾ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಧ್ವಜಪೂಜೆ

Channagiri, Hindu Ganesha, Pratishtapana,
Published on

ಚನ್ನಗಿರಿ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ 9ನೇ ದಿನಕ್ಕೆ ವಿಸರ್ಜನೆ

ಚನ್ನಗಿರಿ: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸುವ ಹಿಂದು ಏಕತಾ ಗಣಪತಿ ಮೂರ್ತಿಯ ಧ್ವಜಪೂಜೆಯನ್ನು ಶಾಸಕ ಬಸವರಾಜ್ ಶಿವಗಂಗಾ ಗುರುವಾರ ನೆರವೇರಿಸಿದರು.

ಈ ವೇಳೆ ಮಾತನಾಡಿ, ಒಂಬತ್ತನೇ ವರ್ಷದ ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಸೆ. 7ರಂದು ಪ್ರತಿಪ್ಠಾಪನೆ ನೆರವೇರಿಸಿ 9ನೇ ದಿನ ಸಕಲ ಗೌರವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಗಣಪತಿ ಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಪಟ್ಟಣದ 27 ಸಮುದಾಯದವರು ಸಂಘಟಿತರಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಪ್ಷೇಪ ಇರುವುದಿಲ್ಲ. ಭಕ್ತಿಯಿಂದ ದೇವರನ್ನು ಆರಾಧಿಸಬೇಕು. ಪ್ರತಿಷ್ಠಾಪಿಸಿದ ದಿನದಿಂದ ಪ್ರತಿ ದಿನ ಮೂರು ಸಮಾಜದವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ವಿದ್ಯಾರ್ಥಿಗಳು, ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಈಗಾಗಲೇ ಸಮಿತಿ ರಚಿಸಲಾಗಿದೆ. ಉತ್ಸವ ಆಚರಣೆಗೆ ವಿವಿಧ ಇಲಾಖೆಗಳ ಅನುಮತಿ ಪಡೆದು ನಿಯಮ ಪಾಲನೆ ಮಾಡಲಾಗುತ್ತದೆ. ಸರ್ಕಾರದ ಕಾನೂನಿನಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಹಬ್ಬ ಆಚರಿಸಲಾಗುತ್ತದೆ ಎಂದರು.

ಹಬ್ಬಗಳಿಂದ ಜನರಲ್ಲಿ ಸಂತಸ, ಸಂತೋಷ ಹಾಗೂ ನೆಮ್ಮದಿ ಮೂಡಬೇಕು. ಎಲ್ಲರು ಭಾಗಿಯಾಗಿ ಸಮಾಜದ ಶಾಂತಿಗೆ ಯಾವುದೇ ತೊಂದರೆಗಳು ಧಕ್ಕೆ ಆಗದಂತೆ ಹಬ್ಬ ಆಚರಿಸಬೇಕು ಎಂದರು.

ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಸಿ. ನಾಗರಾಜ್, ಶ್ರೀಕಾಂತ್, ರವಿಕುಮಾರ್, ತಿಪ್ಪೇಸ್ವಾಮಿ, ಸಿದ್ದಪ್ಪ, ಕಾಫಿಪುಡಿ ಶಿವಾಜಿರಾವ್, ಗಾದ್ರಿರಾಜು, ದೀಪಕ್ ಗಾರ್ಘೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net