ಸೂಳೆಕೆರೆ ಗುಡ್ಡದಲ್ಲಿ ವ್ಯಕ್ತಿ ಶವ ಪತ್ತೆ

Crime Logo
Published on

ಚನ್ನಗಿರಿ: ಹಣಕಾಸಿನ ವ್ಯವಹಾರ ಮಾಡುತ್ತಿದ್ದ ದಾವಣಗೆರೆ ತಾಲೂಕು ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕ (25) ಶವ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಶನಿವಾರ ಪತ್ತೆಯಾಗಿದೆ.

ಮೃತನ ಸಹೋದರ ನಾಗರಾಜನಾಯ್ಕ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಲೆಯಾದ ವ್ಯಕ್ತಿ ನಾಗರಕಟ್ಟೆ ಗ್ರಾಮದ ಸಚಿನ್‌ನಾಯ್ಕ ಹಾಗೂ ಪುರುಷೋತ್ತಮ ಎಂಬುವವರಿಗೆ 1.70 ಲಕ್ಷ ರೂ. ನೀಡಿದ್ದರು. ಹಣ ವಾಪಸ್ ಕೇಳಿದಾಗ ಸೂಳೆಕೆರೆ ನೋಡಿಕೊಂಡು ಬರಲು ಕರೆ ತಂದು ಪಾರ್ಟಿ ಮಾಡಿ, ನಂತರ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಸ್‌ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಆರ್.ಆರ್.ಪಾಟೀಲ್, ಪಿಎಸ್‌ಐ ಭಾರತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ತನಿಖೆಗೆ ತಂಡ ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net