

ಚನ್ನಗಿರಿ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮೂಲಕ ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ನೀತಿ ವಿರೋಧಿಸಿ ಸೆ. 4ರಂದು ದಾವಣಗೆರೆ ಬೆಸ್ಕಾಂ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಬಸವಾಪುರ ರಂಗನಾಥ್ ತಿಳಿಸಿದರು.
ಈ ಹೋರಾಟಕ್ಕೆ ತಾಲೂಕಿನಿಂದ ಒಂದು ಸಾವಿರ ರೈತರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನಿಂದ 10 ಸಾವಿರಕ್ಕೂ ಅಧಿಕ ರೈತರು ಸಂಘಟಿತರಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಕೊಳವೆಬಾವಿಗಳಿಗೆ 2023ರಿಂದ ಜಾರಿಗೊಳಿಸಿರುವ ಕಾನೂನು ರದ್ದು ಮಾಡಿ ಹಿಂದಿನಂತೆ ಬಂದಿರುವಂಥ ವಿದ್ಯುತ್ ಪರಿವರ್ತಕ, ಕಂಬ ಮತ್ತಿತರ ಉಪಕರಣಗಳನ್ನು ಇಲಾಖೆಯೇ ಪೂರೈಸಿ ವಿದ್ಯುತ್ ಸಂಪರ್ಕವನ್ನು ರೈತರಿಗೆ ನೀಡಬೇಕು ಎಂದು ಹೇಳಿದರು.
ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದುವ ರೈತರ ಕುಟುಂಬಗಳಿಗೆ ಸರ್ಕಾರ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅದೇಶ ಕೈ ಬಿಡಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಯಲೋದಹಳ್ಳಿ ಕೆ.ಕಾಳೇಶ್, ನಲ್ಕುದುರೆ ಚನ್ನಬಸಪ್ಪ, ಕರೇಕಟ್ಟೆ ಕಲೀಂವುಲ್ಲಾ, ಮನು, ದಾಗಿನಕಟ್ಟೆ ಬಸವರಾಜ್, ಕುಬೇಂದ್ರಸ್ವಾಮಿ ಇತರರಿದ್ದರು.