ಬೆಳೆನಷ್ಟದಿಂದ ರೈತ ಆತ್ಮಹತ್ಯೆ

download
Published on

ಚನ್ನಗಿರಿ: ಅತಿವೃಷ್ಟಿಯಿಂದ ಮೆಕ್ಕೆಜೋಳ ಫಸಲು ಹಾಳಾದ್ದರಿಂದ ಮನನೊಂದ ತಾಲೂಕಿನ ಚಿಕ್ಕಗಂಗೂರು ಗ್ರಾಮದ ರೈತ ಮುರುಗೇಂದ್ರಪ್ಪ (54) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗ್ರಾಮದ ಸಹಕಾರ ಬ್ಯಾಂಕ್‌ನಲ್ಲಿ 25 ಸಾವಿರ ರೂ. , ತಾಲೂಕಿನ ಹೊದಿಗೆರೆ ಕೆನಾರಾ ಬ್ಯಾಂಕ್‌ನಲ್ಲಿ 40 ಸಾವಿರ ಸಾಲ ಪಡೆದಿದ್ದರು. ಎರಡು ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ಬಾರಿ ಫಸಲು ಸಹ ಉತ್ತಮವಾಗಿತ್ತು. ಆದರೆ ಅಧಿಕ ಮಳೆಯಿಂದ ಬೆಳೆ ಹಾಳಾಗಿದ್ದು, ಸಾಲ ತೀರಿಸುವ ಇರಾದೆಯಲ್ಲಿದ್ದ ಮುರುಗೇಂದ್ರಪ್ಪ, ಮನನೊಂದು ಮನೆಯಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net