ನೌಕರರ ಸಂಘದ ಚುನಾವಣೆಗೆ 34 ನಾಮಪತ್ರ ಸಲ್ಲಿಕೆ

Channagiri, Employee, Election,
Published on

ಚನ್ನಗಿರಿ: ಸರ್ಕಾರಿ ನೌಕರರ ಸಂಘದ ಚನ್ನಗಿರಿ ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ಬುಧವಾರದವರೆಗೆ 30 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ರವಿ ಅಥರ್ಗ ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಅ. 18 ಕೊನೆಯ ದಿನವಾಗಿದೆ. 19ರಂದು ಪರಿಶೀಲನೆ, 21ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಕಣದಲ್ಲುಳಿದ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು.

ಅ. 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ಮತದಾನ ನಡೆಯಲಿದ್ದು, ಅಂದೇ ಎಣಿಕೆ ಕಾರ್ಯ ನಡೆದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಸಂಘದಲ್ಲಿ 2224 ಮತದಾರರಿದ್ದು, ಒಟ್ಟು 34 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೃಷಿ, ಕಂದಾಯ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ, ಶಿಕ್ಷಣ ಮತ್ತಿತರ ಇಲಾಖೆ ನೌಕರರು ಹಕ್ಕು ಚಲಾಯಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net