ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು: ಕುಟುಂಬಸ್ಥರಿಗೆ ಸ್ಥಳದಲ್ಲೇ ಒಂದು ಲಕ್ಷ ರೂ. ಪರಿಹಾರ ನೀಡಿದ ಚನ್ನಗಿರಿ ಶಾಸಕ

Channagiri Devarahalli electric shock death
Published on

ಚನ್ನಗಿರಿ: ತಾಲೂಕಿನ ದೇವರಹಳ್ಳಿ ಬಳಿಯ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಬುಧವಾರ ಬೋರ್‌ವೆಲ್ ದುರಸ್ತಿ ಪಡಿಸುವ ವೇಳೆ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ರವಿ (40) ಮೃತ ದುರ್ದೈವಿ. ಗಾಯಾಳು ರಾಜುನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ವಿತರಣೆ ಕೇಂದ್ರದಲ್ಲಿ ಬೋರ್‌ವೆಲ್‌ಗೆ ಕಬ್ಬಿಣದ ಪೈಪ್ ಇಳಿಸುವಾಗ 11 ಕೆವಿ ತಂತಿ ಪೈಪ್‌ಗೆ ತಗುಲಿ ದುರ್ಘಟನೆ ಸಂಭವಿಸಿದೆ.

ವಿಷಯ ತಿಳಿದು ಮೃತನ ನಿವಾಸಕ್ಕೆ ತೆರಳಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವೈಯಕ್ತಿಕವಾಗಿ 50 ಸಾವಿರ ರೂ., ಬೆಸ್ಕಾಂ ಸಿಬ್ಬಂದಿಯಿಂದ 50 ಸಾವಿರ ರೂ. ಸಂಗ್ರಹಿಸಿ ಕುಟುಂಬಸ್ಥರಿಗೆ ವಿತರಿಸಿದರು.

ಬೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಘಟನೆ ಕುರಿತು ಚರ್ಚೆ ನಡೆಸಿದರು. ಮೃತ ಹಾಗೂ ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಬೆಸ್ಕಾಂ ಇಲಾಖೆಯ ಎಂಡಿ ಮಂಜುಳಾ ಅವರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net