ಶ್ರೀರಾಮನ ಜೀವನ ನಮಗೆ ಆದರ್ಶ

Channagiri, Ayodhya, Sri Rama, Mandir,
Published on

ಚನ್ನಗಿರಿ: ಜನ ಕಲ್ಯಾಣಕ್ಕಾಗಿ ಜನಿಸಿದ ಶ್ರೀರಾಮ ಜೀವನ ನಮಗೆ ಮಾದರಿ ಎಂದು ವಿರಕ್ತಮಠದ ಶ್ರೀ ಡಾ. ಬಸವ ಜಯಚಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಶ್ರೀರಾಮನ ಮಂತ್ರಾಕ್ಷತೆಯನ್ನು ತಾಲೂಕಿನ ಗ್ರಾಮಗಳಿಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಭಾರತೀಯರ ಆರಾಧ್ಯ ದೈವ ಶ್ರೀರಾಮನ ದೇಗುಲ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವುದು ಸಂತಸ ತಂದಿದೆ. ಎಲ್ಲರೂ ಅಲ್ಲಿಗೆ ಹೋಗಿ ದರ್ಶನ ಪಡೆಯಲು ಆಗುವುದಿಲ್ಲ. ಈ ಕಾರಣಕ್ಕಾಗಿ ಭಕ್ತರು ಇರುವಲ್ಲಿ ದೇವರ ಮಂತ್ರಾಕ್ಷತೆ ಕಳುಹಿಸಿಕೊಡಲಾಗಿದೆ. ಇದರ ಮೂಲಕ ರಾಮನ ದರ್ಶನ, ಆಶೀರ್ವಾದ ಪಡೆಯಬಹುದು ಎಂದು ಹೇಳಿದರು.

ದೇವರು ಒಬ್ಬನೆ ನಾಮ ಹಲವು. ಎಲ್ಲ ದೇವರ ಸಂದೇಶಗಳು ಮನುಕುಲ ಒಳಿತಗಾಗಿ ಇವೆ. ಜನರು ಅದನ್ನು ಅರಿಯದೆ ತಪ್ಪುಗಳನ್ನು ಮಾಡುತ್ತಾರೆ ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ರವಿಚಂದ್ರ, ವೇದಾನಂದ್, ವಸಂತ, ಶಿವಲಿಂಗಪ್ಪ, ಸಿದ್ದೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net