

ಚನ್ನಗಿರಿ: ಚನ್ನಗಿರಿ ತಾಲೂಕಿಗೆ ಉಪವಿಭಾಗಾಧಿಕಾರಿ ಕಚೇರಿ ನೀಡುವಂತೆ ಒತ್ತಾಯಿಸಿ ಕೈಗೊಂಡಿರುವ ಸ್ವಯಂಘೋಷಿತ ಬಂದ್‌ಗೆ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಲೂಕು ಹೋರಾಟ ಸಮಿತಿ, ಕಟ್ಟಡ ಮತ್ತು ಕ್ವಾರಿ ಒಡೆಯುವ ಸಂಘ, ಅಂಗಡಿ ಮಾಲೀಕರ ಸಂಘ, ತಾಲೂಕು ವಕೀಲರ ಸಂಘ, ತಾಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಬೆಂಬಲ ಸೂಚಿಸಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗ ಮಾತನಾಡಿ, ಚನ್ನಗಿರಿಗೆ ಉಪವಿಭಾಗ ನೀಡುವುದು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ. ಆದೇಶ ಮರುಪರಿಶೀಲಿಸಬೇಕು ಎಂದರು.
ಕರ್ನಾಟಕ ಕಟ್ಟಡ ಮತ್ತು ಕ್ವಾರಿ ಒಡೆಯುವ ಸಂಘದ ಅಧ್ಯಕ್ಷ ಸೈಯದ್ ಗೌಸ್‌ಪೀರ್, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉಸ್ಮಾನ್ ಷರೀಫ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ಶಿವಾನಂದ, ಹಿರಿಯ ವಕೀಲ ರುದ್ರಪ್ಪ, ಕಾಂಗ್ರೆಸ್ ಮುಖಂಡ ಅಮಾನುಲ್ಲಾ, ಉಪಾಧ್ಯಕ್ಷ ಬಿ.ಆರ್.ಮಹೇಂದ್ರಮೂರ್ತಿ, ಸಹಕಾರ್ಯದರ್ಶಿ ಜಗದೀಶ್, ವೈ.ಡಿ.ಸುರೇಶ್ ಇತರರಿದ್ದರು.