

ಚನ್ನಗಿರಿ: ಕಂದಾಯ ಇಲಾಖೆ ಉಪ ವಿಭಾಗದ ಕಚೇರಿಯನ್ನು ಚನ್ನಗಿರಿ ತಾಲೂಕಿಗೆ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ಕೈಗೊಂಡಿರುವ ಪ್ರತಿಭಟನೆ ಎರಡನೇ ದಿನ ಮಂಗಳವಾರವೂ ಮುಂದುವರಿಯಿತು.
ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ತಾಲೂಕು ಅಭಿವೃದ್ಧಿ ಹೋರಾಟವ ಸಮಿತಿ ಹಾಗೂ ಟಿಪ್ಪುಸುಲ್ತಾನ್ ವೇದಿಕೆ ತಾಲೂಕು ಘಟಕ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಸರ್ಕಾರ ಮಂಜೂರು ಮಾಡಿರುವ ಉಪ ವಿಭಾಗವನ್ನು ಚನ್ನಗಿರಿಗೆ ತರುವುದು ಕಷ್ಟವಾಗುವುದಿಲ್ಲ. ನೋಟಿಫಿಕೇಷನ್ ಆದರೂ ಆದೇಶ ರದ್ದು ಮಾಡುವುದು ಕಷ್ಟವಲ್ಲ. ಎಸಿ ಕಚೇರಿಯನ್ನು ಚನ್ನಗಿರಿಗೆ ನೀಡಲಿ ಎಂದು ಒತ್ತಾಯಿಸಿದರು. ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉಸ್ಮಾನ್ ಷರೀಫ್, ಸಂಘದ ಉಪಾಧ್ಯಕ್ಷ ಬಿ.ಆರ್. ಮಹೇಂದ್ರಮೂರ್ತಿ, ಸಹ ಕಾರ್ಯದರ್ಶಿ ಜಗದೀಶ್, ಹಿರಿಯ ನ್ಯಾಯವಾದಿ ರುದ್ರಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ವಡ್ನಾಳ್ ಜಗದೀಶ್, ರೈತ ಮುಖಂಡರಾದ ಡಿ.ಎಂ. ಜಯಪ್ಪ, ಜಿ.ಇ. ನಂಜಂಡಸ್ವಾಮಿ, ಕೆ.ಇ. ನಾಗರಾಜಪ್ಪ ಇದ್ದರು.