ವಿಜೃಂಭಣೆಯ ಚನ್ನಬಸವೇಶ್ವರ ತೇರು

22 vikram 7
Published on

ಧಾರವಾಡ: ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ಯು.ಬಿ. ಹಿಲ್​ನ ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 4 ಗಂಟೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಲ್ಲಿಂದ ಹೊರಟ ರಥ, ಹಿಂದಿ ಪ್ರಚಾರ ಸಭಾ ವೃತ್ತದವರೆಗೆ ಸಾಗಿ ಮರಳಿ ದೇವಸ್ಥಾನ ತಲುಪಿತು. ರಥೋತ್ಸವದಲ್ಲಿ ಜಾಂಝå್, ಕರಡಿಮಜಲು, ಭಜನಾ ಮಂಡಳಿ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರುಗು ನೀಡಿದವು. ಬೆಳಗ್ಗೆ ಉಳವಿ ಚನ್ನಬಸವೇಶ್ವರ ಹಾಗೂ ವೀರಭದ್ರೇಶ್ವರರಿಗೆ ಮಹಾರುದ್ರಾಭಿಷೇಕ, ವಚನ ಪಠಣ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆದವು. ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಕಾರ್ಯಾಧ್ಯಕ್ಷ ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಬಸವರಾಜ ಸೂರಗೊಂಡ, ಧರ್ಮದರ್ಶಿಗಳಾದ ಎಂ.ಎಲ್. ಹಿರೇಗೌಡರ, ಪಿ.ಎಸ್. ದಂಡಿನ, ಜಿ.ಐ. ವಾಣಿ, ಎಸ್.ಬಿ. ಪಾಗದ, ಟಿ.ಎಲ್. ಪಾಟೀಲ, ಎಂ.ಸಿ. ಪಾಟೀಲ, ಡಿ.ಬಿ. ಪಾಟೀಲ, ಎನ್. ಬಿ. ಗೋಲಣ್ಣವರ, ಜಿ.ಬಿ. ಅಳಗವಾಡಿ. ಎಸ್.ಸಿ. ಹೆಗ್ಗೇರಿ, ಜಿ.ಟಿ. ಶಿರೋಳ, ವಿ.ಬಿ. ಪಾಟೀಲ, ಎಸ್.ಎಸ್. ಪಟ್ಟಣಶೆಟ್ಟಿ, ಆರ್.ಆರ್. ಕೋಟಿ, ಎಂ.ಜಿ. ಬಳ್ಳಾರಿ. ವಿ.ಎಫ್. ಉಳ್ಳಾಗಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net