

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಹುಣ್ಣಿಮೆ ನಿಮಿತ್ತ ನಗರದ ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ವತಿಯಿಂದ ಫೆ. 13ರಂದು ಸಂಜೆ 4.30ಕ್ಕೆ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ.
ಬೆಳಗ್ಗೆ ವಿಶೇಷ ಪೂಜೆ ನಡೆಯಲಿದ್ದು, ಸಂಜೆ ದೇವಸ್ಥಾನದಿಂದ ಭಜನೆ ಹಾಗೂ ಕಲಾ ತಂಡದೊಂದಿಗೆ ಪಲ್ಲಕ್ಕಿ ಹೊರಟು ಪ್ರಮುಖ ರಸ್ತೆ ಮೂಲಕ ಸಂಚರಿಸಿ ಹೆಡ್ ಪೋಸ್ಟ್ ಬಳಿಯಿರುವ ಚನ್ನಬಸವೇಶ್ವರ ವರ್ತುಳ ತಲುಪಿ ಮರಳಿ ದೇವಸ್ಥಾನಕ್ಕೆ ಆಗಮಿಸಲಿದೆ. ಧಾರ್ಮಿಕ ಕಾರ್ಯಕ್ರಮ ನಂತರ ಪ್ರಸಾದ ವಿತರಣೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.