ಚನ್ನಬಸವೇಶ್ವರರ ಮೂರ್ತಿ ಲೋಕಾರ್ಪಣೆ 4ರಂದು

1blh2 ಲೋಕಾರ್ಪಣೆ
Published on

ಬೈಲಹೊಂಗಲ: ಶ್ರೀ ಚನ್ನಬಸವೇಶ್ವರರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಆ.4ರಂದು ಬೆಳಗ್ಗೆ 9ಕ್ಕೆ ಜರುಗಲಿದ್ದು, ಎಲ್ಲರು ಭಾಗಿಯಾಗುವಂತೆ ನಟ ಶಿವರಂಜನ ಬೋಳನ್ನವರ ಕರೆ ನೀಡಿದರು.

ನಗರದ ದೊಡ್ಡ ಕೆರೆ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಚನ್ನಬಸವೇಶ್ವರ ಮೂರ್ತಿ ಲೋಕಾರ್ಪಣೆ ಅಂಗವಾಗಿ ತಮ್ಮ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜನರ ಬೇಡಿಕೆಯಂತೆ ದಾನಿಗಳ ಸಹಕಾರದೊಂದಿಗೆ 10.50ಲ ರೂ. ವೆಚ್ಚದಲ್ಲಿ 40 ಅಡಿ ಎತ್ತರದ ಶ್ರೀ ಚನ್ನಬಸವೇಶ್ವರ ಮೂರ್ತಿಯನ್ನು ಕಲಾವಿದ ಹೊಸಮನಿ ಅವರ ತಂಡದವರು 5 ತಿಂಗಳಲ್ಲಿ ನಿರ್ಮಿಸಿದ್ದಾರೆ. ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸದಾಶಿವಯ್ಯ ಪತ್ರಿಮಠ ಶಾಸ್ತ್ರಿ ಪೂಜೆ ಕೈಂಕರ್ಯ ನೆರವೇರಿಸುವರು. ಈಗಾಗಲೇ ಶಾಸಕ ಮಹಾಂತೇಶ ಕೌಜಲಗಿ ಅವರ ಸಹಕಾರದೊಂದಿಗೆ ನಗರದಲ್ಲಿನ ದೊಡ್ಡ ಕೆರೆಯ ಸಮಗ್ರ ಅಭಿವೃದ್ಧಿ, ತಿನಿಸು ಕಟ್ಟೆ, ಯೋಗಾಭ್ಯಾಸಕ್ಕೆ ವಿಶಾಲವಾದ ಮೈದಾನ, ಮನರಂಜನೆಗಾಗಿ ಬೋಟ್​ ವ್ಯವಸ್ಥೆ ಸೇರಿ ಕೆರೆಯ ಸುತ್ತಲೂ ನಿರ್ಮಿಸಿದ ುಟ್​ಪಾತ್​ ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲಕರವಾಗಿದೆ. ಜತೆಗೆ ಶ್ರೀ ಚನ್ನಬಸವೇಶ್ವರರ ಮೂರ್ತಿ ಲೋಕಾರ್ಪಣೆಯಾಗುತ್ತಿರುವುದು ಸಂತಸದ ಸಂಗತಿ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಪಾಂಡಪ್ಪ ಇಂಚಲ, ಬಿ.ಬಿ.ಗಣಾಚಾರಿ, ಉಳವಪ್ಪ ಬಡ್ಡಿಮನಿ, ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ಚಂದ್ರಶೇಖರ ಹೊಸೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net