ಚನ್ನಬಸವೇಶ್ವರ ಮೂರ್ತಿ ನಿರ್ಮಾಣ ಮಾದರಿ

4blh1a ಉಳವಿ ಚನ್ನಬಸವೇಶ್ವರ ಮೂರ್ತಿ (2)
Published on

ಬೈಲಹೊಂಗಲ: ಜನರ ಬಹುದಿನಗಳ ಬೇಡಿಕೆಯಂತೆ ಪಟ್ಟಣದಲ್ಲಿ ಎಲ್ಲರ ಸಹಕಾರದೊಂದಿಗೆ ಚಿತ್ರನಟ ಶಿವರಂಜನ ಬೋಳನ್ನವರ ನೇತತ್ವದಲ್ಲಿ ಉಳವಿ ಚನ್ನಬಸವೇಶ್ವರ ಮೂರ್ತಿ ನಿರ್ಮಾಣ ಮಾಡಿರುವ ಕಾರ್ಯ ಶ್ಲಾನೀಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ದೊಡ್ಡ ಕೆರೆ ದಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂದಾಜು 10.50 ಲಕ್ಷ ರೂ. ವೆಚ್ಚದ 40 ಅಡಿ ಎತ್ತರದ ಉಳವಿ ಚನ್ನಬಸವೇಶ್ವರರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದಲ್ಲಿ ನಾಡಿನ ಆರಾಧ್ಯದೈವ ಚನ್ನಬಸವೇಶ್ವರರ ಮೂರ್ತಿ ಲೋಕಾರ್ಪಣೆಯಾಗಿರುವುದು ಭಕ್ತ ಸಮೂಹದಲ್ಲಿ ಹರ್ಷ ಮೂಡಿಸಿದೆ ಎಂದರು.

ನಟ ಶಿವರಂಜನ ಬೋಳನ್ನವರ ಮಾತನಾಡಿ, ಮೂರ್ತಿಕಾರ ಹೊಸಮನಿ ತಂಡದ ಸುಮಾರು 5 ತಿಂಗಳ ಪರಿಶ್ರಮದಿಂದ ಸುಂದರ ಮೂರ್ತಿ ಸಿದ್ಧವಾಗಿದೆ. ಶಾಸಕರ ಸಹಕಾರ ಹಾಗೂ ಭಕ್ತರ ಸೇವೆಯಿಂದ ಭವ್ಯವಾಗಿ ಚನ್ನಬಸವೇಶ್ವರ ಮೂರ್ತಿ ಲೋಕಾರ್ಪಣೆಯಾಗಿದೆ ಎಂದು ತಿಳಿಸಿದರು.

ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಧರ್ಮದ ಅರಿವು ಅರಿತು ಬಾಳಿದರೆ ಜ್ಞಾನನಿಧಿ ಉಳವಿ ಚನ್ನಬಸವೇಶ್ವರರ ಮೂರ್ತಿ ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ ಎಂದರು.

ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಪ್ರಭಾ ಅಕ್ಕನವರು, ಕರ್ನಾಟಕ ನವ ನಿರ್ಮಾಣ ಪಡೆ ಜಿಲ್ಲಾಧ್ಯ ಮಹಾಂತೇಶ ತುರಮರಿ, ಉಳವಿ ಚನ್ನಬಸವೇಶ್ವರ ಟ್ರಸ್ಟ್​ ಅಧ್ಯ ಸಂಜಯ ಕಿತ್ತೂರ, ಶಂಕರಯ್ಯಶಾಸ್ತ್ರಿ, ವಿರೇಶ ಕಂಬಳಿ ಮಾತನಾಡಿದರು.

ಪುರಸಭೆ ಅಧ್ಯ ವಿಜಯ ಬೋಳನ್ನವರ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಸದಾಶಿವಯ್ಯ ಪತ್ರಿಮಠ, ಮುಖ್ಯಾಧಿಕಾರಿ ವಿರೇಶ ಹಸಬಿ, ಮುಖಂಡರಾದ ಮಲ್ಲಿಕಾರ್ಜುನ ಬೋಳನ್ನವರ, ಪಾಂಡಪ್ಪ ಇಂಚಲ, ಬಿ.ಬಿ.ಗಣಾಚಾರಿ, ವಿರೂಪಯ್ಯ ಕೋರಿಮಠ, ಉಳವಪ್ಪ ಬಡ್ಡಿಮನಿ, ಮಡಿವಾಳಪ್ಪ ಹೋಟಿ, ಸುನೀಲ ಮೆಟಗುಡ್ಡ, ಮಹಾಂತೇಶ ಮೆಟಗುಡ್ಡ, ಡಾ. ಬಸವರಾಜ ಮಹಾಂತಶೆಟ್ಟಿ, ಡಾ.ಮಂಜುನಾಥ ಮುದಕನಗೌಡರ, ಸುರೇಶ ಯರಗಟ್ಟಿ, ಶ್ರೀಶೈಲ ಯಡಳ್ಳಿ, ಶಂಕರ ಬೋಳನ್ನವರ, ಶಂಕರೆಪ್ಪ ತುರಮರಿ, ಮಹೇಶ ಬೆಲ್ಲದ, ಮಹಾಬಳೇಶ್ವರ ಬೋಳನ್ನವರ, ಮಹಾಂತೇಶ ಮತ್ತಿಕೊಪ್ಪ, ಕಾಶಿನಾಥ ಬಿರಾದಾರ, ಸುಭಾಷ ತುರಮರಿ, ಎ್​. ಎಸ್​.ಸಿದ್ದನಗೌಡರ, ಕುತುಬುದ್ದೀನ್​ ಮುಲ್ಲಾ, ಬಾಬುಸಾಬ್​ ಸಂಗೊಳ್ಳಿ, ಚಂದ್ರಶೇಖರ ಹೊಸೂರ, ಚಂದ್ರಶೇಖರ ಕೊಪ್ಪದ, ಶ್ರೀಶೈಲ ಶರಣಪ್ನವರ, ಶಾಂತಕ್ಕ ಮಡ್ದಿಕರ, ಸುಶೀಲಾ ಲಕ್ಕನಗೌಡರ, ರತ್ನಾ ಗೋದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net