ಚನ್ನಬಸವ ಮಹಾಸ್ವಾಮೀಜಿ ಜಾತ್ರೆ ಜ.11ಕ್ಕೆ

17 GVT 01
ಗಂಗಾವತಿ ಆರಾಧ್ಯದೈವ ಶ್ರೀ ಗುರು ಚನ್ನಬಸವ ಮಹಾಸ್ವಾಮೀಜಿ ಅವರ 79ನೇ ಪುಣ್ಯಸ್ಮರಣೋತ್ಸವದ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಷಟಸ್ಥಲ ಧ್ವಜಾರೋಹಣ ಮೂಲಕ ಸೋಮವಾರ ಚಾಲನೆ ನೀಡಲಾಯಿತು. ಪುರಾಣ ಪ್ರವಚನಕಾರ ರುದ್ರಯ್ಯಶಾಸಿ ಹಿರೇಮಠ ಮುದ್ಲಾಪುರ, ಮುಖಂಡರಾದ ಶಾಂತಯ್ಯಸ್ವಾಮಿ, ಸಿದ್ದನಗೌಡ, ಶ್ರೀ ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್ ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಇತರರಿದ್ದರು.
Published on

ಗಂಗಾವತಿ: ನಗರದ ಆರಾಧ್ಯದೈವ ಶ್ರೀ ಗುರು ಚನ್ನಬಸವ ಮಹಾಸ್ವಾಮೀಜಿ ಅವರ 79ನೇ ಪುಣ್ಯಸ್ಮರಣೋತ್ಸವದ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ನೀಡಲಾಯಿತು.

ಜ.11ರಂದು ಜಾತ್ರಾಮಹೋತ್ಸವ ಹಮ್ಮಿಕೊಂಡಿದ್ದು, ತಿಂಗಳ ಪರ್ಯಂತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಪುರಾಣ ಪ್ರವಚನಕ್ಕೆ ಷಟಸ್ಥಳ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ನಿತ್ಯ ಸಂಜೆ 6.30ರಿಂದ 8.30ರವರೆಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪುರಾಣ ಪ್ರವಚನ ನಡೆಯಲಿದೆ.

ಜಾತ್ರಾಮಹೋತ್ಸವದ ವಿವಿಧ ಕಾರ್ಯಕ್ರಮ, ಸಾಮೂಹಿಕ ವಿವಾಹ ಮತ್ತು ಪುರಾಣ ಪ್ರವಚನ ಕುರಿತು ಶ್ರೀ ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್ ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಮಾಹಿತಿ ನೀಡಿದರು. ಪ್ರಮುಖರಾದ ಸೋಮಶೇಖರ ಕಂಪ್ಲಿ, ಶರಣಬಸವಸ್ವಾಮಿ ಅಯೋಧ್ಯಾ, ಶಿವಪ್ರಕಾಶ ಅಕ್ಕಿ, ರುದ್ರಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net