

ಮಡಿಕೇರಿ: ಪೂರ್ವಜರು, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜಾಗಗಳನ್ನು ಹಣದ ಆಸೆಯಿಂದ ಕೊಡಗಿನಲ್ಲಿ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ, ಆಸ್ತಿ ಮಾರಾಟ ಮಾಡದೇ ಉಳಿಸಿಕೊಳ್ಳಬೇಕಾಗಿದೆ ಎಂದು ವಿಧಾನ ಪರಿ?ತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮನವಿ ಮಾಡಿದರು.
ಟಿ.ಶೆಟ್ಟಿಗೇರಿಯ ಇಲ್ಲಿನ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಇವರ ಆಶ್ರಯದಲ್ಲಿ ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ೭ನೇ ವ?ರ್ದ ಕಾವೇರಿ ಚಂಗ್ರಾಂದಿ ತೀರ್ಥ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಸ್ತಿ ಮಾರಾಟ ಮಾಡಿದ ಹಣ ಎ?್ಟು ದಿನ ಉಳಿಯಬಹುದು ಎಂದು ಪ್ರಶ್ನಿಸಿದ ಅವರು, ಕೊಡಗಿನ ಅತ್ಯುತ್ತಮ ಗಾಳಿ,ನೀರಿನ ಪರಿಸರ ಚೈತನ್ಯವನ್ನು ನೀಡುತ್ತದೆ. ಇಂತಹ ಜಾಗಗಳನ್ನು ಮೌಲ್ಯಕಟ್ಟಲು ಸಾಧ್ಯವಿಲ್ಲದಿದ್ದರೂ, ಹಣಕ್ಕಾಗಿ ಮಾರಾಟ ಮಾಡಿ ಬೆಂಗಳೂರು, ಮೈಸೂರಿಗೆ ತೆರಳಿ ನೆಲೆಸುವಂತಾಗಿರುವುದು ದುರದೃ?್ಟಕರ. ಕೃಷಿಯಲ್ಲಿ ಸವಾಲುಗಳು ಹೆಚ್ಚಿದ್ದು, ಲಾಭದ ಪ್ರಮಾಣ ಕಡಿಮೆ ಇದೆ. ಕೃಷಿಯೊಂದಿಗೆ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರ್ಯಾಯ ಆರ್ಥಿಕ ಅದಾಯಗಳಿಸಿ ಕೊಡಗಿನ ಆಸ್ತಿ ಉಳಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಮಾಜ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡಗಿನ ಮಣ್ಣಿಗೆ ಸಂಬಂಧವೇ ಇಲ್ಲದ ಆಚರಣೆಗಳು ಕೊಡಗಿನಲ್ಲಿ ಹೆಚ್ಚಾಗುತ್ತಿದೆ. ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೊಡವ ಸಂಸ್ಕೃತಿ, ಪರಂಪರೆಯ ವೈಭವವನ್ನು ಸಾರಿ, ಕಿರಿಯರಲ್ಲಿ ಅಭಿಮಾನ ಮೂಡಿಸಬೇಕಾಗಿದೆ ಎಂದರು.
ಕೊಡವ ಸಮಾಜ ಕ್ರೀಡಾ-ಸಾಂಸ್ಕೃತಿಕ ಸಮಿತಿ ಮಾಜಿ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಅಧ್ಯಕ್ಷತೆ ವಹಿಸಿ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿ?ತ್ ಸದಸ್ಯ ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ಸದಸ್ಯ ಮಾಣೀರ ಗಗನ್,ದಾನಿ ಮುಕ್ಕಾಟೀರ ಕನ್ನು ಕರುಂಬಯ್ಯ ಹಾಜರಿದ್ದರು.
ಕೊಡವ ಸಮಾಜ ನಿರ್ದೇಶಕಿಂ ಕನರ್ಂಡ ರೂಪ ದೇವಯ್ಯ ಪ್ರಾರ್ಥಿಸಿ, ಚಂಗುಲಂಡ ಆಶ್ವಿನಿ ಸತೀಶ್ ವಂದಿಸಿದರು.
ಜನಮನ ಸೆಳೆದ ಮನರಂಜನೆ: ಚೆಟ್ಟಂಗಡ ಕುಟುಂಬದ ಮಹಿಳಾ ತಂಡದಿಂದ ಉಮ್ಮತಾಟ್, ಗೆಜ್ಜೆ ತಂಡ್ ನ್ಯತ್ಯ, ಸ್ವಾಗತ ನೃತ್ಯ, ಚೆಟ್ಟಂಗಡ ಲೇಖನ ಅಕ್ಕಮ್ಮ ರಿಂದ ಭರತನಾಟ್ಯ ಪ್ರದರ್ಶನ, ತಿಂಗಕೊರ್ ಮೊಟ್ಟ್ ತಲಕಾವೇರಿ ತಂಡದಿಂದ ಕೋಲಾಟ್, ಕತ್ತಿಯಾಟ್, ಪರೆಯಕಳಿ ಪ್ರದರ್ಶನ, ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿನಿಯರ ತಂಡದಿಂದ ನ್ಯತ್ಯ ಜನಮನ ಸೆಳೆಯಿತು.