ಜೀವನ ಶೈಲಿ ಬದಲಾಯಿಸಿಕೊಳ್ಳಿ

14 nrp 1 (1)
Published on

ಎನ್.ಆರ್. ಪುರ: ಬದಲಾದ ಆಹಾರ ಪದ್ದತಿ, ಜೀವನ ಶೈಲಿಯಿಂದಾಗಿ ಅನೇಕ ಕಾಯಿಲೆಗಳಿಗೆ ಬರುತ್ತಿದ್ದು, ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಯುಸಾನಾ ಇಂಡಿಯಾ ಕಂಪನಿ ಹೆಲ್ತ್ ಕೋಚ್ ಮಮತ ನಾಗರಾಜ್ ಸಲಹೆ ನೀಡಿದರು. ಪಟ್ಟಣದ ರೋಟರಿ ಕ್ಲಬ್ನ ವಾರದ ಸಭೆಯಲ್ಲಿ ಕುಟುಂಬದಲ್ಲಿ ಆಹಾರ ಪದ್ದತಿ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಪ್ರಸ್ತುತ ಆಹಾರದಲ್ಲಿ ಅಕ್ಕಿ ಮಾತ್ರ ಬಳಸುತ್ತಿರುವುದು ಸರಿಯಲ್ಲ. ಆಹಾರದಲ್ಲಿ ಬೇಳೆ ಕಾಳು, ದ್ವಿದಳ ಧಾನ್ಯ, ಹಸಿ ತರಕಾರಿಗಳನ್ನು ತಿನ್ನಬೇಕು. ಮೊಳಕೆ ಕಾಳುಗಳಲ್ಲಿ ಹೆಚ್ಚು ಪ್ರೋಟಿನ್ ಸಿಗಲಿದೆ. ನಮ್ಮ ಒತ್ತಡದ ಬದುಕು ಕಡಿಮೆ ಮಾಡಬೇಕು. ಯೋಗ, ಧ್ಯಾನದಿಂದ, ಮನಸ್ಸು ಏಕಾಗ್ರತೆಯಾಗಿ ಒತ್ತಡ ಕಡಿಮೆಯಾಗಲಿದೆ ಎಂದರು. ದಿವಾಕರ್ ಮಾತನಾಡಿ, ರೋಟರಿ 3182ರ ರೋಟರಿ ಜಿಲ್ಲಾ ಅಧ್ಯಕ್ಷರ ಆಯ್ಕೆಯು ಜ.24ರಂದು ನಡೆಯಲಿದೆ. ನಾಲ್ಕು ಜಿಲ್ಲೆಗಳಲ್ಲಿ ಬರುವ ರೋಟರಿ ಕ್ಲಬ್ ಅಧ್ಯಕ್ಷರು ಮತ ನೀಡಲಿದ್ದಾರೆ ಎಂದರು. ರೋಟರಿ ಕಾರ್ಯದರ್ಶಿ ಮಧು ವೆಂಕಟೇಶ್, ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್, ಖಜಾಂಚಿ ಎಸ್.ಎಸ್.ಶಾಂತಕುಮಾರ್, ಸದಸ್ಯರಾದ ಬಿ.ಟಿ.ವಿಜಯಕುಮಾರ್, ಎಸ್.ಎನ್.ಲೋಕೇಶ್, ಕೆ.ಎಸ್.ರಾಜಕುಮಾರ್, ವಿದ್ಯಾನಂದಕುಮಾರ್, ಎಚ್.ಡಿ.ವಿನಯ, ಕಣಿವೆ ವಿನಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net