

ಲಕ್ಷ್ಮೇಶ್ವರ: ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದರೂ ಇಲ್ಲಸಲ್ಲದ ನಿಯಮಾವಳಿಯಿಂದ ಗ್ರಾಮೀಣ ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಕೂಡಲೇ ನಿಯಮಾವಳಿ ಮಾರ್ಪಡಿಸಿ ಬಸ್ ಪಾಸ್ ವಿತರಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದಿಂದ ತಹಸೀಲ್ದಾರ್ ವಾಸುದೇವ ಸ್ವಾಮಿ ಮೂಲಕ ಮುಖ್ಯಮಂತ್ರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಮಲ್ಲು ಕಳಸಾಪುರ ಹಾಗೂ ಹಿರಿಯ ಪತ್ರಕರ್ತ ರಮೇಶ ನಾಡಗೇರ ಮಾತನಾಡಿ, ಬಸ್ಪಾಸ್ ನೀಡುವಲ್ಲಿ ಅನೇಕ ನಿಬಂಧನೆ ವಿಧಿಸಿದ್ದರಿಂದ ಗ್ರಾಮೀಣ ಹಾಗೂ ತಾಲೂಕು ಪತ್ರಕರ್ತರು ಸೌಲಭ್ಯದಿಂದ ವಂಚಿತರಾಗುತ್ತಾರೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ನಿತ್ಯ ಜೀವದ ಹಂಗು ತೊರೆದು ಸುದ್ದಿಗಾಗಿ ಅಲೆದಾಡುವ ಪತ್ರಕರ್ತರನನು ಕಡೆಗಣಿಸಲಾಗುತ್ತಿದೆ. ಸರ್ಕಾರ ಕೂಡಲೇ ಹೊಸ ಆದೇಶ ಹೊರಡಿಸಿ ಎಲ್ಲ ಪತ್ರಕರ್ತರಿಗೂ ಯೋಜನೆ ಸೌಲಭ್ಯ ಸಿಗುವಂತಾಗಲಿ ಎಂದರು
ಪತ್ರಕರ್ತರಾದ ನಾಗರಾಜ ಹಣಗಿ, ದಿಗಂಬರ ಪೂಜಾರ, ಅಶೋಕ ಸೊರಟೂರ, ಮಹಾಳಿಂಗರಾಯ ಪೂಜಾರ, ಸುರೇಶ ಲಮಾಣಿ, ಪರಮೇಶ ಲಮಾಣಿ, ಸೋಮಣ್ಣ ಯತ್ತಿನಹಳ್ಳಿ, ಶಿವಲಿಂಗಯ್ಯ ಹೊತಗಿಮಠ, ಮಂಜುನಾಥ ರಾಠೋಡ ಇದ್ದರು.