ಜಾನುವಾರು ಸಂತೆ ಸ್ಥಳ ಬದಲಾವಣೆ ಮಾಡಿ

dhp sante
ದೇವರಹಿಪ್ಪರಗಿ ಪಟ್ಟಣದ ಹೊಸನಗರದಲ್ಲಿ ಪ್ರತಿ ಸೋಮವಾರ ನಡೆಯುವ ಜಾನುವಾರು ಸಂತೆಯ ಪರಿಣಾಮ ವಾಹನ ದಟ್ಟಣೆ ಆಗಿರುವುದು.
Published on

ದೇವರಹಿಪ್ಪರಗಿ: ಪಟ್ಟಣದ ಹೊಸನಗರದಲ್ಲಿ ಪ್ರತಿ ಸೋಮವಾರದ ಜಾನುವಾರು ಸಂತೆ ದಿನ ವಾಹನ ದಟ್ಟಣೆ ಆಗಲಿದ್ದು, ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗಿದೆ. ಆದ್ದರಿಂದ ಕೂಡಲೇ ಸಂತೆಯ ಸ್ಥಳ ಬದಲಾವಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇಲ್ಲಿನ ಬಸವನ ಬಾಗೇವಾಡಿ- ತಾಳಿಕೋಟೆ ಮುಖ್ಯ ರಸ್ತೆಯಲ್ಲಿ ಸಂತೆ ದಿನ ಖಾಸಗಿ ವಾಹನಗಳ ಪ್ರಯಾಣಿಕರು ಗಂಟೆಗೂ ಹೆಚ್ಚು ವೇಳೆ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡಪರ ಹೋರಾಟಗಾರ ರಹಿಮಾನ ಕಣಕಾಲ ಮಾತನಾಡಿ, ಸಂತೆ ದಿನ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಈ ಕುರಿತು ಹಲವು ಬಾರಿ ತಾಲೂಕು ಹಾಗೂ ಸ್ಥಳೀಯ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಅಲ್ಲದೆ, ಜಾನುವಾರುಗಳ ಸಂತೆಯನ್ನು ಪಟ್ಟಣದಿಂದ ಅಂದಾಜು ಎರಡ್ಮೂರು ಕಿಮೀ ದೂರದಲ್ಲಿ ನಡೆಸಬೇಕು. ಈ ಜಾಗದಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆೆಗೆ ಕ್ರಮ ಕೈಗೊಳ್ಳಬೇಕು. ಇಂದಿನಿಂದ ಯಾವುದೇ ವಾಹನ ದಟ್ಟಣೆ ಆಗದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಅಗತ್ಯ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಹೀಗೆ ಮುಂದುವರಿದರೆ ವಿವಿಧ ಸಂಘಟನೆಗಳ ಮುಖಂಡರು ಸೇರಿ ತಾಲೂಕು ಆಡಳಿತ ಕಚೇರಿ ಎದುರುಗಡೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಪ್ರಮುಖರಾದ ಹುಸೇನ ಗೌಂಡಿ, ಸುನೀಲ ಕನಮಡಿ, ಸದ್ದಾಮ್ ಮಂಡೆ, ಇಮಾಮ್ ಮುಲ್ಲಾ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net