

ಹುಬ್ಬಳ್ಳಿ : ವಿವಿಧ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಸಮಯವನ್ನು ಬದಲಾಯಿಸಲಾಗಿದೆ.
ಜು. 15 ರಿಂದ ಎಸ್ಎಸ್ಎಸ್ ಹುಬ್ಬಳ್ಳಿ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ರೈಲು, ಎಸ್ಎಸ್ಎಸ್ ಹುಬ್ಬಳ್ಳಿ - ನರಸಾಪುರ - ಅಮರಾವತಿ ಡೈಲಿ ಎಕ್ಸ್ಪ್ರೆಸ್, ದಾದರ - ಪುದುಚೆರಿ ಟ್ರೖೆ ವೀಕ್ಲಿ ಎಕ್ಸ್ಪ್ರೆಸ್, 16 ರಿಂದ ದಾದರ - ತಿರುನೆಲ್ವೆಲಿ ಟ್ರೖೆ ವೀಕ್ಲಿ ಎಕ್ಸ್ಪ್ರೆಸ್, ಗಾಂಧಿಧಾಮ- ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್, 18 ರಿಂದ ದಾದರ - ಮೈಸೂರು ಶರಾವತಿ ವೀಕ್ಲಿ ಎಕ್ಸ್ಪ್ರೆಸ್, ಜೋಧಪುರ- ಕೆಎಸ್ಆರ್ ಬೈ ವೀಕ್ಲಿ ಎಕ್ಸ್ಪ್ರೆಸ್, 19 ರಿಂದ ಅಜಮೇರ- ಮೈಸೂರು ಬೈ ವೀಕ್ಲಿ ಎಕ್ಸ್ಪ್ರೆಸ್, 20 ರಿಂದ ಎಸ್ಎಸ್ಎಸ್ ಹುಬ್ಬಳ್ಳಿ - ಯಶವಂತಪುರ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ಬದಲಾದ ಸಮಯದೊಂದಿಗೆ ನಿಲುಗಡೆಗೊಳ್ಳಲಿವೆ.
ಎಸ್ಎಸ್ಎಸ್ ಹುಬ್ಬಳ್ಳಿ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ರೈಲು ಮಧ್ಯಾಹ್ನ 1.15ಕ್ಕೆ ಹೊರಟು, ಕುಸುಗಲ್ಲ ನಿಲ್ದಾಣದಲ್ಲಿ 1.25/1.26ಕ್ಕೆ, ಹೆಬಸೂರ ನಿಲ್ದಾಣದಲ್ಲಿ1.34/1.35ಕ್ಕೆ, ಶಿಸವಿನಹಳ್ಳಿ ನಿಲ್ದಾಣದಲ್ಲಿ 1.39/1.40ಕ್ಕೆ, ಅಣ್ಣಿಗೇರಿ ನಿಲ್ದಾಣದಲ್ಲಿ 1.53/1.54, ಹುಲಕೋಟಿಯಲ್ಲಿ 2.03/2.04, ಗದಗನಲ್ಲಿ 2.25/2.40ಕ್ಕೆ ನಿಲುಗಡೆಗೊಳ್ಳಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ - ನರಸಾಪುರ - ಅಮರಾವತಿ ಡೈಲಿ ಎಕ್ಸ್ಪ್ರೆಸ್ ರೈಲು ಮಧ್ಯಾಹ್ನ 1.20ಕ್ಕೆ ಹೊರಟು, ಅಣ್ಣಿಗೇರಿಯಲ್ಲಿ 1.27/1.28, ಗದಗನಲ್ಲಿ 1.50/1.52, ಕೊಪ್ಪಳದಲ್ಲಿ 2.34/2.36, ಮುನಿರಾಬಾದ್ನಲ್ಲಿ 2.56/2.57, ಹೊಸಪೇಟೆಯಲ್ಲಿ 3.15/3.25, ತೋರಣಗಲ್ಲುನಲ್ಲಿ 3.57/3.59ಕ್ಕೆ ನಿಲುಗಡೆಯಾಗಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ ದಾದರ-ಪುದುಚೆರಿ ಟ್ರೖೆ ವೀಕ್ಲಿ ಎಕ್ಸ್ಪ್ರೆಸ್, ದಾದರ- ತಿರುನೆಲ್ವೆಲಿ ಟ್ರೖೆ ವೀಕ್ಲಿ ಎಕ್ಸ್ಪ್ರೆಸ್, ದಾದರ-ಮೈಸೂರು ಶರಾವತಿ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳು ಮಧ್ಯಾಹ್ನ 12.05/12.15ಕ್ಕೆ, ಅಜಮೇರ- ಮೈಸೂರು ಬೈ ವೀಕ್ಲಿ ಎಕ್ಸ್ಪ್ರೆಸ್, ಜೋಧಪುರ-ಕೆಎಸ್ಆರ್ ಬೆಂಗಳೂರು ಬೈ ವೀಕ್ಲಿ ಎಕ್ಸ್ಪ್ರೆಸ್, ಗಾಂಧಿಧಾಮ - ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್ ರೈಲು 2/2.15ಕ್ಕೆ, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳು ಬೆಳಗ್ಗೆ 11ಕ್ಕೆ ನಿಲುಗಡೆಗೊಳ್ಳಲಿವೆ.